ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ಹಲವು ಸೌಲಭ್ಯಗಳು: ಶೇಠ್
ಸಿಂಧನೂರು: ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅಲ್ಪಸಂಖ್ಯಾತರ ಸಮುದಾಯದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಮಂಜೂರು ಮಾಡಿದೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ರಾಜ್ಯ ಉಪಾಧ್ಯಕ್ಷ ಇಲಿಯಾಸ್ ಶೇಠ್ ತಿಳಿಸಿದ್ದಾರೆ.
ಶಾಸಕರ ಕಾರ್ಯಲಯದಲ್ಲಿ ಅಲ್ಪಸಂಖ್ಯಾತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಅಲ್ಪಸಂಖ್ಯಾತರಲ್ಲಿ ಮೂರು ಜಾತಿಯ ಪಂಗಡಗಳಿವೆ. ಇವರ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಹಲವಾರು ಅಭಿವೃದ್ಧಿಯ ಕ್ರಮಗಳನ್ನು ಜಾರಿಗೆ ತರಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಜನರು ತಕ್ಕ ಪಾಠ ಕಲಿಸುವುದರ ಮೂಲಕ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಯುವ ನಾಯಕ ರಾಹುಲ್ ಗಾಂಧಿ ಕೈ ಬಲಪಡಿಸಬೇಕೆಂದು ಹೇಳಿದರು.
ಕೆಪಿಸಿಸಿ ಸದಸ್ಯ ನದೀಮಲ್ಲಿ ಹೈಮದ್ ಪಾಷ ಖಾದ್ರಿ ಮಾತನಾಡಿ, ಜಿಲ್ಲೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಹಿರಿಯರಾಗಿದ್ದು ಇವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಹೇಳಿದರು.
ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು. ಬೆಂಗಳೂರಿನಲ್ಲಿ ವರ್ಷದಾದ್ಯಂತದಲ್ಲಿ ಹಜ್ಭವನ ಪೂರ್ಣವಾಗಲಿದೆ. ಇದಕ್ಕೆ ಸರ್ಕಾರದಿಂದ 10 ಕೋಟಿ ಬಿಡುಗಡೆಯಾಗಿದೆ. ಇಲ್ಲಿನ ಅಲ್ಪಸಂಖ್ಯಾತರ ಪಂಗಡಗಳಾದ ಜೈನ್, ಕ್ರಿಶ್ಚಿಯನ್ ಸಮುದಾಯ ಭವನಗಳಿಗೆ 10 ಲಕ್ಷ ಮಂಜೂರಾಗಿವೆ ಎಂದು ಹೇಳಿದರು.
ಗುರುವಿನ ಮೌಲಾನಿಸಾಬ್, ಮಹ್ಮದ್ ಖಾದರ್ ಹೈಮದ್, ಜಿಪಂ ಸದಸ್ಯ ಚಂದುಸಾಬಬ್ಮುಳ್ಳೂರು, ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಖಾಜಿ ಮಲಿಕ್ ವಕೀಲರು, ನಗರಸಭೆ ಸದಸ್ಯ ಪ್ರಭುರಾಜ, ಮಾಜಿ ಸದಸ್ಯ ಎಸ್. ಶರಣೇಗೌಡ, ಕಾಂಗ್ರೇಸ್ ನಗರ ಯೂಥ್ ಅಧ್ಯಕ್ಷ, ಮುಖಂಡರಾದ ಶಿವುಕುಮಾರ ಜವಳಿ, ನನ್ನು ಮೇಸ್ತ್ರಿ, ಮಹಿಬೂಬ್ ಇತರರು ಇದ್ದರು.