ಇಂದು ಸಾಹಿತ್ಯ ಸಿಂಚನ ಜನಪದ ಸಂಜೆ
ಸಿಂಧನೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು,ೂ ನಿವೇದಿತಾ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅರಳಹಳ್ಳಿಯವರ ಸಹಯೋಗದಲ್ಲಿ ತಾಲೂಕಿನ ಅರಳಹಳ್ಳಿ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಾಳೆ ಅ.27 ರಂದು ತಾಲೂಕ ಕಸಾಪ ಮಾಸಿಕ ಕಾರ್ಯಕ್ರಮ ಮನೆಯಂಗಳದಲ್ಲಿ ಸಾಹಿತ್ಯ ಸಿಂಚನ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ದೇವೇಂದ್ರಕುಮಾರ ಹಕಾರಿ ಒಂದು ನೆನಹು ಹಾಗೂ ಜಾನಪದ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಯೆಂದು ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ ತಿಳಿಸಿದ್ದಾರೆ. ಕಾರ್ಯಕ್ರಮದ ಸಾನಿಧ್ಯವನ್ನು ಅರಳಹಳ್ಳಿಯ ಪಂಪಾಪತಿ ಶ್ರೀ ವಹಿಸಿಕೊಳ್ಳಲಿದ್ದು, ತಾಲೂಕ ಕಸಾಪ ಗೌರವ ಸಲಹೆಗಾರ ವೈ. ನರೇಂದ್ರನಾಥ ಉದ್ಘಾಟಿಸುವರು. ಸಾಹಿತಿ ದೇವೇಂದ್ರಕುಮಾರ ಹಕಾರಿ ಅವರ ಬದುಕು ಬರಹ ಕುರಿತು ಉಪನ್ಯಾಸಕಿ ಈರಮ್ಮ ಹಿರೇಮಠ ಉಪನ್ಯಾಸ ನೀಡಲಿದ್ದಾರೆ. ಮುಖ್ಯಅತಿಥಿಗಳಾಗಿ ಜಿಲ್ಲಾ ಕಸಾಪ ಗೌರವಾಧ್ಯಕ್ಷ ಎಸ್. ಶರಣೇಗೌಡ, ಗೌರವ ಕಾರ್ಯದರ್ಶಿ ಎಸ್. ದೇವೇಂದ್ರಗೌಡ, ಪತ್ರಕರ್ತ ಶರಣಪ್ಪ ಗೋನಾಳ, ನಿವೇದಿತಾ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಘನಮಠದಯ್ಯಸ್ವಾಮಿ ಸಂಗಡಿಗರಿಂದ ಭಜನೆ ಪದ, ತಾವರಗೇರಿಯ ತಿಪ್ಪಣ್ಣ ಸಂಗಡಿಗರಿಂದ ರಿವಾಯಿತ್ ಪದಗಳು, ತಾವರಗೇರಿಯ ಹನುಮನಗೌಡ ಸಂಗಡಿಗರಿಂದ ಡೊಳ್ಳಿನಪದ ದೂರದರ್ಶನ ಕಲಾವಿದ ವೀರೇಶ ಸಾಲಿಮಠ, ಚಿದಾನಂದಪ್ಪ ಗೊರೇಬಾಳ, ಬಸವರಾಜ್ ಮೋತಿ, ತತ್ವಪದಕಾರರಾದ ಲಿಂಗಪ್ಪ ಮಣ್ಣೂರು, ನಾರಾಯಣಪ್ಪ ಮಾಡಶಿರವಾರ್, ಡಿ.ಹೆಚ್. ಕಂಬಳಿ, ಮಾರುತೇಶ ಬಿ.ಎಂ, ಎಚ್. ಭಾರತಿದೇವಿ, ಪಂಪಾರೆಡ್ಡಿ ಅರಳಹಳ್ಳಿ, ಇಬ್ರಾಹಿಂ ಪಟೇಲ್, ಬಸವರಾಜ್ ಕಂಬಾರ್, ಶಂಕರಗುರಿಕಾರ್, ಬಸವರಾಜ್ ಗಸ್ತಿ ಜನಪದ ಗಗೀತೆ ಹಾಡುವರು.