ನಿದ್ದೆಗೆ ಜಾರಿರುವ ನಗರಸಭೆ: ಆರೋಪ
ಸಿಂಧನೂರು: ನಗರಸಭೆ ಆಡಳಿತಕ್ಕೆ ಬಂದು ಆರು ತಿಂಗಳು ಕಳೆದರೂ ಇಲ್ಲಿಯವರೆಗೂ ಯಾವುದೇ ವಾರ್ಡ್ನಲ್ಲಿ ಪ್ರಗತಿ ಕೆಲಸಗಳಾಗಿಲ್ಲ. ನಗರಸಭೆ ಕುಂಭಕರ್ಣ ನಿದ್ರೆಗೆ ಜಾರಿದೆ ಎಂದು ಬಿಜೆಪಿ ಯುವಮೋರ್ಚಾ ನಗರಘಟಕದ ಅಧ್ಯಕ್ಷ ಮಹಾದೇವ ನಾಯಕ, ಉಪಾಧ್ಯಕ್ಷ ಪಿ. ರವಿಕುಮಾರ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ನಗರದ ಏಳನೇ ವಾರ್ಡ್ನಲ್ಲಿ ಕರ್ಮಕಾಂಡ ಹೇಳತೀರದು. ವಾರ್ಡ್ನಾದ್ಯಂತ ಗಬ್ಬುನಾರುತ್ತಿರುವ ಚರಂಡಿಗಳು, ಬೀದಿದೀಪಗಳ ಕೊರತೆ, ಮಹಿಳೆಯರಿಗೆ ಶೌಚಾಲಯಗಳು ಇಲ್ಲ. ಆ ವಾರ್ಡ್ನ ಮಹಿಳೆಯರು ಹಿಡಿಶಾಪ ಹಾಕುತ್ತಿದ್ದಾರೆ. ಅಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.