ಪುರಸಭೆ ಮುಖ್ಯಾಧಿಕಾರಿ ನೇಮಕಕ್ಕೆ ಆಗ್ರಹ
ದೇವದುರ್ಗ: ಸ್ಥಳೀಯ ಪುರಸಭೆಗೆ ಕಾಯಂ ಮುಖ್ಯಾಧಿಕಾರಿ ನೇಮಿಸುವಂತೆ ಪುರಸಭೆ ಅಧ್ಯಕ್ಷ ಫಕ್ರೋದ್ದೀನ್ ಗೌರಂಪೇಟ್ ಮನವಿ ಮಾಡಿದ್ದಾರೆ.
ಅವರು ಶನಿವಾರ ಸಹಾಯಕ ಆಯುಕ್ತೆ ಮಂಜುಶ್ರೀ ಅವರಿಗೆ ಮನವಿ ಪತ್ರ ಸಲ್ಲಿಸಿ, ಕಳೆದ ಸೆ.17ರಿಂದ ಪುರಸಭೆಯ ಮುಖ್ಯಾಧಿಕಾರಿ ಶ್ರೀಪಾದ ಭಟ್ ಕರ್ತವ್ಯಕ್ಕೆ ಹಾಜರಾಗಿಲ್ಲ. ಅದರಿಂದ ಪುರಸಭೆಯ ಆಡಳಿತಾಧಿಕಾರಿಯೆಂದು ತಹಸೀಲ್ದಾರ್ಗೆ ಅಧಿಕಾರ ವಹಿಸಲಾಗಿದೆ. ಆದರೆ ತಹಸೀಲ್ದಾರರಿಗೆ ತಮ್ಮ ಇಲಾಖೆಯ ಕೆಲಸಗಳ ಹೊರೆಯಿದ್ದು, ಅದರಿಂದಾಗಿ ಪುರಸಭೆಯ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿದೆ ಎಂದು ದೂರಿದರು.
ಕೂಡಲೇ ಪುರಸಭೆಗೆ ಕಾಯಂ ಮುಖ್ಯಾಧಿಕಾರಿಯನ್ನು ನೇಮಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ನಾಗಪ್ಪ ಉಪ್ಪಾರ, ಸದಸ್ಯರಾದ ಚಂದ್ರಶೇಖರ ಚಲುವಾದಿ, ರಾಮಕೃಷ್ಣಾ, ವೆಂಕಟೇಶ ಮಕ್ತಲ್, ಶಿವನಗೌಡ ಶೆಟ್ಟಿ, ಮಹ್ಮದ್ ಯೂನೂಸ್ ಶಹಾಪೂರಿ ಮತ್ತಿತರರಿದ್ದರು.