ಕ್ರಿಕೆಟ್: ಆಫ್ತಾಬ್ ತಂಡಕ್ಕೆ ಜಯ
ಲಿಂಗಸ್ಗೂರು: ತಾಲೂಕಿನ ಗುರುಗುಂಟಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಫ್ತಾಬ್ ಕ್ರಿಕೆಟ್ ತಂಡ ಪ್ರಥಮ ಸ್ಥಾನ ಪಡೆದಿದೆ.
ಗುರುಗುಂಟಾ ಸಂಸ್ಥಾನದ ರಾಜಾ ಸೋಮನಾಥ ನಾಯಕರ ಸಹಕಾರದಿಂದ ಹಮ್ಮಿಕೊಂಡಿದ್ದ ಟೂರ್ನಿಯಲ್ಲಿ ಆಫ್ತಾಬ್ ಕ್ರಿಕೆಟ್ ತಂಡ ಹಾಗೂ ಅಭಿರಾಮ್ ಕ್ರಿಕೆಟ್ ತಂಡಗಳ ಮಧ್ಯೆ ನಡೆದ ಪಂದ್ಯದಲ್ಲಿ ಆಫ್ತಾಬ್ ತಂಡ ಜಯ ಗಳಿಸಿದೆ.
ನಂತರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಜಾ ಅಮರೇಶ್ವರ ನಾಯಕ ಹಾಗೂ ಜಿಪಂ ಮಾಜಿ ಸದಸ್ಯ ರಾಜಾ ಶ್ರೀನಿವಾಸ ನಾಯಕರು ಜಯ ಗಳಿಸಿದ ತಂಡಕ್ಕೆ ಪ್ರಥಮ ಬಹುಮಾನ 11 ಸಾವಿರ ಮತ್ತು ಒಂದು ಕಪ್ ನೀಡಿ ಗೌರವಿಸಲಾಯಿತು. ಕ್ರಿಕೆಟ್ ಪಂದ್ಯಾವಳಿಯಲ್ಲಿ ತಂಡದ ಸದಸ್ಯರಾದ ಹಬೀಬ್, ಶ್ರೀಕಾಂತ, ಅಮರೇಶ, ಬಾಬು ಟೈಲರ್, ಮಂಜು, ಆರೀಫ್, ಶಾಂತು, ಆದಿ ಸೇರಿದಂತೆ ಭಾಗವಹಿಸಿದ್ದರು.