ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ದೇಶ ಕಟ್ಟಲು ಯುವಶಕ್ತಿ ಜಾಗೃತಗೊಳ್ಳಲಿ

Lingaraj Badiger
Updated On : 30 Oct 2013, 11:39 am

ಸಿಂಧನೂರು: ಭಾರತ ಶೇ.51 ಯುವಶಕ್ತಿಯನ್ನು ಹೊಂದಿರುವ ದೇಶವಾಗಿದ್ದು, ಅದನ್ನು ಜಾಗೃತಗೊಳಿಸಿ ದೇಶ ಕಟ್ಟಲು ಮುಂದಾಗಬೇಕೆಂದು ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಕರೆ ನೀಡಿದರು.
ತಾಲೂಕಿನ ಹೊಸಳ್ಳಿ (ಇಜೆ) ಕ್ಯಾಂಪಿನಲ್ಲಿ ನಗರದ ಸಂಕೇತ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು. ಇಂದು ಪ್ರತಿಯೊಬ್ಬರದಲ್ಲಿ ಸ್ವಾರ್ಥತೆ ಹೆಚ್ಚುತ್ತಿದೆ. ಯುವಕರಲ್ಲಿ ಸೇವಾ ಮನೋಭಾವನೆ ಬರಲಿ ಎನ್ನುವ ಕಾರಣಕ್ಕೆ ಗಾಂಧಿಜೀ ಆಶಯದಂತೆ ಎನ್‌ಎಸ್‌ಎಸ್ ಜಾರಿಗೊಳಿಸಲಾಗಿದೆ. ಶಕ್ತಿಯುತ ರಾಷ್ಟ್ರ ನಿರ್ಮಾಣಕ್ಕೆ ಯುವಕರಿಗೆ ಜವಾಬ್ದಾರಿ ವಹಿಸಬೇಕಿದೆ. ನಮ್ಮ ಮುಂದಿರುವ ಸವಾಲುಗಳಾದ ಬಡತನ, ನಿರುದ್ಯೋಗ, ಅಭಿವೃದ್ಧಿ ಕೊರತೆ ಮುಂತಾದ ಸಮಸ್ಯೆಗಳ ಬಗ್ಗೆ ಅರಿವು ಮೂಡಬೇಕಿದೆ ಎಂದರು.
ಪ್ರಾಚಾರ್ಯ ಶ್ರೀಧರ ಕುಲ್ಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಅಮರೇಶ ಅಂಗಡಿ, ಸಂಕೇತ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಅನಿಲ್ರಾಜ್, ನ್ಯಾಯವಾದಿ ಮಲ್ಲಯ್ಯ ಮಾತನಾಡಿದರು. ಎನ್‌ಎಸ್‌ಎಸ್ ಅಧಿಕಾರಿ ರಿಯಾಜ್ ಪಾಷಾ ವರದಿ ವಾಚಿಸಿದರು. ಪತ್ರಕರ್ತ ಶರಣಪ್ಪ ಗೋನಾಳ, ಎಸ್‌ಡಿಎಂಸಿ ಅಧ್ಯಕ್ಷ ಯಮನಪ್ಪ, ಗ್ರಾಮದ ಮುಖಂಡರಾದ ಮಹಾದೇವಪ್ಪ, ಶರಣಯ್ಯ ಹಾಗೂ ಇತರರು ಇದ್ದರು. ಅಕ್ಷತಾ ಪ್ರಾರ್ಥಿಸಿದರು. ಚನ್ನಮಲ್ಲಿಕಾರ್ಜುನ ಸ್ವಾಗತಿಸಿದರು. ಅಮರೇಶ ಅಲಬನೂರು ನಿರೂಪಿಸಿ  ಖೇಮಣ್ಣ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement