ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಂಗಳಮುಖಿಯರಿಗೆ ಕಾನೂನು ಅರಿವಿರಲಿ: ನ್ಯಾ.ಬಿಎಸ್.ಆರ್

Lingaraj Badiger
Updated On : 30 Oct 2013, 11:39 am

ಸಿಂಧನೂರು: ಮಂಗಳಮುಖಿಯರಿಗೆ ಕಿರುಕುಳ ನೀಡುವುದು, ದೌರ್ಜನ್ಯ ಎಸಗುವುದು ಕೇಳಿಬರುತ್ತದೆ. ದೌರ್ಜನ್ಯ ಪ್ರಕರಣಗಳು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲು ಮಾಡಲು ಕಾನೂನಿನಲ್ಲಿ ಅವಕಾಶವಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಬಿ.ಎಸ್. ರಾಯಣ್ಣನವರ ಹೇಳಿದರು.
ವಕೀಲರ ಸಂಘದ ಸಭಾಂಗಣದಲ್ಲಿ ಮಂಗಳವಾರ ನಡೆದ ಲಿಂಗತ್ವ ಅಲ್ಪಸಂಖ್ಯಾತರ ಕುರಿತು ಏರ್ಪಡಿಸಿದ್ದ ಕಾನೂನು ಅರಿವು- ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆಲ ನೈಸರ್ಗಿಕ ಕಾರಣಗಳಿಂದ ಸಮಾಜದಲ್ಲಿ ಮಂಗಳಮುಖಿಯರಾಗಿ ಬದುಕುತ್ತಿರುವ ವ್ಯಕ್ತಿಗಳನ್ನು ಗೌರವದಿಂದ ಎಲ್ಲರೂ ಕಾಣಬೇಕು. ಅವರಿಗೆ ಕಾನೂನಿನ ಅವಶ್ಯಕತೆ ಬಿದ್ದಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ನೆರವು ನೀಡಲಾಗುವುದು ಎಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯೆ ಡಾ. ರಮ್ಯಾ ದೀಪಿಕಾ, ಸಹಾಯಕ ಸರ್ಕಾರಿ ಅಭಿಯೋಜಕ ಶೇಖರಪ್ಪ ಶಾಲಿಗನೂರು ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಪ್ತಮಿತ್ರ ಸಂಸ್ಥೆಯ ಸಂಯೋಜಕ ತಿಮ್ಮಪ್ಪ ನಾಯಕ, ಸಮುದಾಯ ಸಂಘಟನೆಯ ಬಿ.ವಂದನಾ, ಹುಲಿಗೆಮ್ಮ, ಕರ್ನಾಟಕ ರಾಜ್ಯ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ಮುಖಂಡರಾದ ವೀರೇಶ ನಾಯ್ಕ, ಮಹಿಬೂಬ, ಕುಮಾರಮ್ಮ ಮತ್ತಿತರರು ಉಪಸ್ಥಿತರಿದ್ದರು.  ಆಪ್ತಮಿತ್ರ ಸಂಸ್ಥೆಯ ಅಧ್ಯಕ್ಷ ಮೌಲಾಲಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement