ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಇಂದು

Lingaraj Badiger
Updated On : 1 Nov 2013, 10:38 am

ರಾಯಚೂರು:  ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟವಾಗಿದ್ದು, ಪತ್ರಕರ್ತ ದತ್ತು ಸರ್ಕಿಲ್, ಛಾಯಾಗ್ರಾಹಕ ಮಲ್ಲಿಕಾರ್ಜುನಸ್ವಾಮಿ ಹಾಗೂ ಸಮಾಜ ಸೇವಕ ಸೈಯದ್ ಹಫಿಜುಲ್ಲಾ ಸೇರಿ ಒಟ್ಟು 13 ಜನರಿಗೆ ಲಭಿಸಿದೆ.
ನಗರದಲ್ಲಿ ಗುರುವಾರ ಸಹಾಯಕ ಆಯುಕ್ತೆ ಮಂಜುಶ್ರೀ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಪ್ರಶಸ್ತಿ ವಿಜೇತರ ಹೆಸರು ಅಂತಿಮಗೊಳಿಸಿದ್ದು, ಪ್ರಶಸ್ತಿ ವಿಜೇತರ ವಿವರ ಇಂತಿದೆ. ಪತ್ರಿಕೋದ್ಯಮದಲ್ಲಿ ದತ್ತು ಸರ್ಕಿಲ್, ಸಾಹಿತ್ಯ ಕ್ಷೇತ್ರದಲ್ಲಿ ಲಿಂಗಸ್ಗೂರು ಸರ್ಕಾರಿ ಕಾಲೇಜಿನ ಉಪನ್ಯಾಸಕ ಡಾ. ಎನ್.ಎಚ್. ಪೂಜಾರ್, ಲಲಿತ ಕಲೆಯಲ್ಲಿ ರಮೇಶ ಮಾಲೆ, ಸಮಾಜ ಸೇವೆ ಕ್ಷೇತ್ರದಲ್ಲಿ ಸೈಯದ್ ಹಫೀಜುಲ್ಲಾ, ರುದ್ರಯ್ಯ ಗಣಾರಿ, ಪತ್ರಿಕಾ ಛಾಯಾಗ್ರಾಹಣ ಕ್ಷೇತ್ರದಲ್ಲಿ ಮಲ್ಲಕಾರ್ಜುನಸ್ವಾಮಿ, ವೈದ್ಯಕೀಯ-ಡಾ.ಮಹಾಲಿಂಗಪ್ಪ, ದೇಶಿಯ ವೈದ್ಯ ಪದ್ಧತಿ- ಡಾ.ಚಿದಾನಂದ ಎನ್. ಶಿರಸಗಿ, ಜಾನಪದ-ದುರುಗಮ್ಮ, ರಂಗಭೂಮಿ- ಅಣವೀತಯ್ಯಸ್ವಾಮಿ ಶಕ್ತಿನಗರ, ಯೋಗ- ಡಾ.ತಿಮ್ಮಪ್ಪ ಎನ್.ವಡ್ಡೆಪಲ್ಲಿ, ಹಿಂದೂಸ್ತಾನಿ ಸಂಗೀತ-ಎನ್.ಬಿ.ಲಕ್ಷ್ಮೀರೆಡ್ಡಿ ಹೊಸೂರು, ಶಿಕ್ಷಣ-ದಂಡಪ್ಪ ಬಿರಾದಾರ.
ಇಂದು ಪ್ರಶಸ್ತಿ ಪ್ರದಾನ:  ನಗರದಲ್ಲಿ ನ.1ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement