ಜಿಲ್ಲಾಡಳಿತದಿಂದ ಇಂದಿರಾ ಪುಣ್ಯತಿಥಿ
ರಾಯಚೂರು: ಜಿಲ್ಲಾಡಳಿತದಿಂದ ಗುರುವಾರ ದೇಶದ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರ ಪುಣ್ಯತಿಥಿ, ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ್ ಪ್ರಕಾಶ ಪಾಟೀಲ್, ಇಂದಿರಾಗಾಂಧಿ, ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಜಿಲ್ಲಾಧಿಕಾರಿ ನಾಗರಾಜು, ಅಪರ ಜಿಲ್ಲಾಧಿಕಾರಿ ತಿಮ್ಮಪ್ಪ, ಸಹಾಯಕ ಆಯುಕ್ತೆ ಎನ್.ಮಂಜುಶ್ರೀ, ಜಿಪಂ ಉಪಾಧ್ಯಕ್ಷ ಕೆ.ಶರಣಪ್ಪ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
ಕಾಂಗ್ರೆಸ್ ಕಚೇರಿಯಲ್ಲಿ ದಿ.ಇಂದಿರಾ ಪುಣ್ಯತಿಥಿ
ರಾಯಚೂರು: ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಪುಣ್ಯತಿಥಿಯನ್ನು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಚರಿಸಲಾಯಿತು. ದಿ.ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಗೌರವ ಸಲ್ಲಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ.ವಸಂತಕುಮಾರ ವಹಿಸಿದ್ದರು. ಶಾಸಕ ಪ್ರತಾಪಗೌಡ ಪಾಟೀಲ್, ಮಾಜಿ ಶಾಸಕರಾದ ಎ.ಪಾಪಾರೆಡ್ಡಿ, ರಾಜಾ ರಾಯಪ್ಪ ನಾಯಕ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಬಸವರಾಜರೆಡ್ಡಿ, ಸೈಯದ್ ಗೌಸ್ ಮೊಹಿನುದ್ದೀನ್ ನವಾಬ್, ಕೆ.ಶರಣಪ್ಪ, ಜಿ.ಶಿವಮೂರ್ತಿ ಇತರರಿದ್ದರು.
ಮುಂಬಡ್ತಿ ಪಟ್ಟಿ ಪ್ರಕಟ: ಸೂಚನೆ
ರಾಯಚೂರು: ಸ್ನಾತಕೋತ್ತರ ಪದವಿ ಪಡೆದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರಿಗೆ ಉಪನ್ಯಾಸಕರ ಹುದ್ದೆಗೆ ಮುಂಬಡ್ತಿ ನೀಡಲು ಪದವಿಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಅವರಿಗೆ ಸಲ್ಲಿಸಬೇಕಾದ ಕ್ರೋಡೀಕೃತ ಪಟ್ಟಿ ಪ್ರಕಟಿಸಲಾಗಿದೆ. ಗುಲ್ಬರ್ಗ ಡಿಡಿಪಿಐ ಕಚೇರಿಯ ವೆಬ್‌ಸೈಟ್ ವಿಳಾಸ ಢಿಢಿಢಿ. ್ಛಠ್ಝ.್ಜ್ಡಟಛಿಛ್ಠ್ಜಛ.್ಛ್ಟಟ ಇಲ್ಲಿಗೆ ಸಂಪರ್ಕಿಸುವ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಆಕ್ಷೇಪಣೆಗಳು ಅಥವಾ ಸೇರ್ಪಡೆಗಳಿದ್ದಲ್ಲಿ ನ.15 ರೊಳಗೆ ನಗರದ ಡಿಡಿಪಿಐ ಅವರಿಗೆ ಸಲ್ಲಿಸಲು ತಿಳಿಸಿದೆ.