ಪ್ರಶಸ್ತಿಗೆ ಗೋನವಾರ ಆಯ್ಕೆ: ಅಪಸ್ವರ
ಸಿಂಧನೂರು: ಜಿಲ್ಲೆಯ ಹನುಮಂತರಾವ ಗೋನವಾರ ಅವರಿಗೆ ಸಂಗೀತ ಕ್ಷೇತ್ರದಲ್ಲಿನ ಸೇವೆಗಾಗಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಇದಕ್ಕೆ ಅಪಸ್ವರ ಎದ್ದಿದೆ.
ಪ್ರಶಸ್ತಿ ಪಟ್ಟಿಯಲ್ಲಿ ಗೋನವಾರ ಅವರ ಹೆಸರು ನೋಡಿದ ಮೇಲೆಯೇ ಜಿಲ್ಲೆಯವರೊಬ್ಬರು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರು ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿ, ಗೋನವಾರ ಅವರ ಹೆಸರನ್ನು ಈವರೆಗೂ ಜಿಲ್ಲೆಯ ಹಿರಿಯ ಸಂಗೀತಗಾರರು, ಸಾಹಿತಿಗಳು ಕೇಳಿಲ್ಲ. ಇವರು ಜಿಲ್ಲೆಯ ಯಾವ ಭಾಗದಲ್ಲೂ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಲ್ಲ. ಅಷ್ಟೇ ಏಕೆ ಮಾಧ್ಯಮದವರಿಗೂ ಇವರ ಬಗ್ಗೆ ಮಾಹಿತಿ ಇಲ್ಲ. ಇಂತವರನ್ನು ಗುರುತಿಸಿ ಜಿಲ್ಲೆಯ ಹೆಸರಿನಲ್ಲಿ ಪ್ರಶಸ್ತಿ ನೀಡಿರುವುದು ನಿಜವಾದ ಅರ್ಹರಿಗೆ ಮಾಡಿದ ಅನ್ಯಾಯವಾಗಿದೆ. ಆಯ್ಕೆ ಸಮಿತಿಯವರು ಜಿಲ್ಲೆಗೆ ಆದ ಅನ್ಯಾಯವನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.