ಬಸ್ ನಿಲ್ದಾಣದಲ್ಲಿ ನಟ ಡಾ.ವಿಷ್ಣು ಭಾವಚಿತ್ರ ಸ್ಥಾಪನೆಗೆ ಒತ್ತಾಯ
ರಾಯಚೂರು: ನಗರದ ನೂತನ ಬಸ್ ನಿಲ್ದಾಣದಲ್ಲಿ ಕನ್ನಡದ ಹಿರಿಯ ನಟ ದಿ. ಡಾ.ವಿಷ್ಣುವರ್ಧನ್ ಅವರ ಭಾವಚಿತ್ರ ಅಳವಡಿಸುವಂತೆ ಕರ್ನಾಟಕ ಸುಪುತ್ರ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಪಲುಗುಲ ನಾಗರಾಜ ಮನವಿ ಮಾಡಿದ್ದಾರೆ.
ಈ ಕುರಿತು ಈಶಾನ್ಯ ಸಾರಿಗೆ ಸಂಸ್ಥೆಯ ಎಂ.ಡಿ. ಅವರಿಗೆ ಪತ್ರ ಬರೆದಿರುವ ಅವರು, ಡಾ.ವಿಷ್ಣುವರ್ಧನ್ ಅವರ ಬದುಕು ಆದರ್ಶಪ್ರಾಯ. ಅಂಥ ಮಹಾನ್ ನಟನ ಭಾವಚಿತ್ರವನ್ನು ನಗರದ ಬಸ್ ನಿಲ್ದಾಣದಲ್ಲಿ ಸ್ಥಾಪಿಸುವ ಮೂಲಕ ಕಲಾವಿದನಿಗೆ ಗೌರವಿಸುವಂತೆ ಒತ್ತಾಯಿಸಿದ್ದಾರೆ.
ಸಂಸ್ಥೆಯಿಂದ ಅಧಿಕೃತ ಆದೇಶ ನೀಡಿದಲ್ಲಿ ಸಂಘದಿಂದಲೇ ಭಾವಚಿತ್ರ ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
--