ಮೊಬೈಲ್ನಲ್ಲಿ ಸ್ತ್ರೀಯರ ಬೆತ್ತಲೆ ಚಿತ್ರ ಸೆರೆ: ಆರೋಪ
ಕ.ಪ್ರ.ವಾರ್ತೆ, ದೇವದುರ್ಗ, ಅ.31
ಪಟ್ಟಣದ ಪ್ರಸಿದ್ಧ ಶಂಭುಲಿಂಗೇಶ್ವರ ದೇವಸ್ಥಾನದ ಪೂಜಾರಿ ವೀರೇಶ ಸ್ವಾಮಿ ಅವರನ್ನು ಕೂಡಲೇ ಬಂಧಿಸುವಂತೆ ಪುರಸಭೆ ಮಾಜಿ ಅಧ್ಯಕ್ಷ ರಂಗಪ್ಪ ಗೋಸಲ್ ಒತ್ತಾಯಿಸಿದ್ದಾರೆ.
ದೇವರ ಹೆಸರಿನಲ್ಲಿ ವೀರೇಶಸ್ವಾಮಿ ಮಹಿಳೆಯರಿಗೆ ವಂಚಿಸುತ್ತಿದ್ದಾರೆ. ಹೆಣ್ಣು ಮಕ್ಕಳ ಬೆತ್ತಲೆ ಚಿತ್ರಗಳನ್ನು ಮೊಬೈಲ್ಗಳಲ್ಲಿ ಸೆರೆ ಹಿಡಿಯುತ್ತಿರುವುದು ಬಯಲಾಗಿದೆ. ಇಂಥ ಹೇಯ ಕೃತ್ಯ ಎಸಗಿದ ಅವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ದೇವಾಲಯ ಆವರಣದಲ್ಲಿ ಮುಗ್ಧ ಹೆಣ್ಣು ಮಕ್ಕಳಿಗೆ ಸಂತಾನ ಭಾಗ್ಯ, ಕಂಕಣ ಭಾಗ್ಯ ಕಲ್ಪಿಸುವುದಾಗಿ ಹೇಳಿ ನಂಬಿಸಿ ಮೋಸ ಮಾಡುತ್ತಿದ್ದಾರೆ. ವಿವಸ್ತ್ರಗೊಳಿಸಿ ಮೊಬೈಲ್ ಅವರ ಬೆತ್ತಲೆ ಚಿತ್ರ ಸೆರೆ ಹಿಡಿಯುತ್ತಿದ್ದ ವೀರೇಶಸ್ವಾಮಿಯನ್ನು ವಿಚಾರಣೆಗೊಳಪಡಿಸಬೇಕು. ಮುಗ್ಧ ಹೆಣ್ಣು ಮಕ್ಕಳಿಗೆ ಆಗಿರುವ ಲೈಂಗಿಕ ದೌರ್ಜನ್ಯ ತಡೆಯಲು ಆಡಳಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.