ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಕ್ರಮ ಉಸುಕು ಮಾರಾಟ

Vishwanath S
Updated On : 2 Sept 2013, 11:45 am

ಕನ್ನಡಪ್ರಭ ವಾರ್ತೆ ಟಿ ಸಿಂಧನೂರು ಟಿ ಸೆ.1
ತಾಲೂಕಿನ ವ್ಯಾಪ್ತಿಗೆ ಒಳಪಡುವ ಹೆಡಗಿನಾಳ ಗ್ರಾಮದಲ್ಲಿ, ಲೋಕೊಪಯೋಗಿ ಅಧಿಕಾರಿಗಳು ಆಂಧ್ರಪ್ರದೇಶದ ಲಾರಿಗಳಿಗೆ ಹಗಲು ಹೊತ್ತಿನಲ್ಲಿಯೇ ಭಯವಿಲ್ಲದೆ ಅಕ್ರಮವಾಗಿ ಹೊಳೆಯಲ್ಲಿರುವ ಉಸುಕನ್ನು ಸರಬರಾಜು ಮಾಡಲು ಸಹಕರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸ್ಥಳಿಯ ಸರ್ಕಾರಿ ಶಾಲೆಯ ಎಸ್‌ಡಿಎಮ್‌ಸಿ ಮಾಜಿ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ಸುಮಾರು ಒಂದು ವಾರದಿಂದಲೂ ಲೋಕಪಯೋಗಿ ಅಧಿಕಾರಿಗಳಾದ ನಾಗರಾಜ ಹಾಗೂ ಸಿಬ್ಬಂದಿ ಈ ಉಸುಕನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದು, ಗ್ರಾಮಸ್ಥರು ಕೇಳಿದ್ದಕ್ಕೆ ಮೌನವಾಗಿದ್ದಾರೆ. ಇದರ ಬಗ್ಗೆ ಪೋಲಿಸರಿಗೆ, ಲೋಕೋಪಯೋಗಿ ಅಧಿಕಾರಿಗಳಿಗೆ ಮಾಹಿತಿ ಗೊತ್ತಿದ್ದು ತಮಗೆ ಎನೂ ಗೊತ್ತಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿರುವುದು ಹಲವು ಅನುಮಾನಗಳಿಗೆ ಆಸ್ಪದವಾಗಿದೆ.
ನಗರದ ಚಿಕ್ಕ ಹಳ್ಳದಲ್ಲಿ ರಾತ್ರಿಯಿಡೀ ಯಾಮೊಬ್ಬ ಅಧಿಕಾರಿಗಳಿಗೆ ಹೆದರದೆ ಅಕ್ರಮ ಉಸುಕು ಸಾಗಾಣಿಕೆ ನಡೆದಿದೆ. ಗಾಡಿಯ ಮಾಲೀಕರಿಗೆ ವಿಚಾರಿಸಿದರೆ ರವಿವಾರ ಇರುವುದರಿಂದ ಯಾವ ಅಧಿಕಾರಿ ಇತ್ತ ಸುಳಿಯುವುದಿಲ್ಲ. ಅವರಿಗೆ ಸೇರುವುದು ಸೇರುತ್ತೆ ಎನ್ನುತ್ತಾರೆ. ಲಿಂಗಸ್ಗೂರು ಸಹಾಯಕ ಆಯುಕ್ತ ಟಿ. ಯೋಗೇಶ ಉಸುಕು ಅಕ್ರಮ ಸಾಗಾಣಿಕೆ ಮಾಡುವವರನ್ನು ಕೂಡಲೇ ಬಂಧಿಸುವಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement