ಗೋಶಲರಾಯನ ಅದ್ಧೂರಿ ಜಾತ್ರೆ
ಮುದಗಲ್: ಪಟ್ಟಣದ ವೆಂಕಟರಾಯನಪೇಟೆಯ ಗೋಶಲರಾಯನ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು.
ಗೋಶಲರಾಯನ ದೇವಸ್ಥಾನದಲ್ಲಿ ಭಕ್ತರು ವಿಶೇಷ ಪೂಜೆ ಕೈಂಕರ್ಯಗಳನ್ನು ಮಾಡಿ ದೇವಸ್ಥಾನದಿಂದ ಆಂಜನಯ್ಯನ ಭಾವಚಿತ್ರವನ್ನು ಟ್ರ್ಯಾಕ್ಟರ್ ವಾಹನಕ್ಕೆ ಶೃಂಗರಿಸಿ ಭವ್ಯ ಮೆರವಣಿಗೆ ಮಾಡಲಾಯಿತು. ಡೊಳ್ಳು ಕುಣಿತ, ಮಹಿಳೆಯರಿಂದ ಕುಂಬಗಳನ್ನು ಹೊತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆ ನೇತೃತ್ವವನ್ನು ಮುಖಂಡರಾದ ರಾಮು ಯಾದವ್, ಶಿವಪ್ಪ ಸುಂಕದ್, ಕರಿಯಪ್ಪ, ಪ್ರಕಾಶ ಸೇರಿದಂತೆ ನೂರಾರು ಜನರು, ಮಹಿಳೆಯವರು ಭಾಗವಹಿಸಿದ್ದರು.
ಮೆರವಣಿಗೆ ನಂತರ ದೇವಸ್ಥಾನದಲ್ಲಿ ಮಹಾಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಮೆರವಣಿಗೆಯಲ್ಲಿ ಯುವಕರು ಮತ್ತು ಕುಂಬಗಳನ್ನು ಹೊತ್ತ ಮಹಿಳೆಯರು ಸಮವಸ್ತ್ರಗಳನ್ನು ದರಿಸಿದ್ದು ವಿಶೇಷವಾಗಿತ್ತು.