ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಯುಜಿಡಿ ಕಾಮಗಾರಿಗಳ ಅನುಷ್ಠಾನಕ್ಕೆ ಚರ್ಚೆ: ಬಾದರ್ಲಿ

Lingaraj Badiger
Updated On : 5 Sept 2013, 10:50 am

ಸಿಂಧನೂರು: ರಸ್ತೆ ಅಭಿವೃದ್ಧಿ, ಒಳಚರಂಡಿ, ಕುಡಿವ ನೀರಿನ ಯೋಜನೆ, ಯುಜಿಡಿ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ವಿವಿಧ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿಗಳು ಆರಂಭಗೊಳ್ಳಲಿವೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯುಜಿಡಿ ಯೋಜನೆಯಡಿ ಮಂಜೂರಾದ ನಗರ ನೀರು ಸರಬರಾಜು, ಒಳಚರಂಡಿ ಕಾಮಗಾರಿ ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕು. ಮುಖ್ಯಮಂತ್ರಿ ಉದ್ಘಾಟಿಸಿ ಹೋದ ಸಿಂಧನೂರು- ಕುಷ್ಟಗಿ ಹಾಗೂ ಸಿಂಧನೂರು- ಗಂಗಾವತಿ ರಸ್ತೆ ಕಾಮಗಾರಿಗಳನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದಿಂದ ಹಾಗೂ ಕುಡಿಯುವ ನೀರು ಪೂರೈಕೆ ಕಾಮಗಾರಿಯ ಜವಾಬ್ದಾರಿ ನಗರ ನೀರು ಸರಬರಾಜು ಇಲಾಖೆ ಹೊತ್ತಿದ್ದು, ಗುಣಮಟ್ಟದ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದರು.
ತುರ್ವಿಹಾಳ ಗ್ರಾಮದಿಂದ ಸಿಂಧನೂರು ರಸ್ತೆಗುಂಟ ಹೊಸ ಪೈಪ್‌ಲೈನ್ ಬರುವುದರಿಂದ ಮೊದಲು ಪೈಪ್‌ಲೈನ್ ಕಾಮಗಾರಿ ಮುಗಿಸಿ ನಂತರವೇ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್‌ಎನ್‌ಸಿ ಲ್ಯಾವಲಿನ್ ಸಂಸ್ಥೆಯ ಅಧಿಕಾರಿ ರೇಣುಕಯ್ಯ, ಸಹಾಯಕ ಎಂಜಿನಿಯರ್ ಶರಣಬಸಪ್ಪ, ರೆಸಿಡೆಂಟ್ ಎಂಜಿನಿಯರ್ ದುರುಗಪ್ಪ ಕಗಲಗೊಂಬ, ಕೆಆರ್‌ಡಿಸಿಎಲ್ ಅಧಿಕಾರಿ ಶಿವಯೋಗಿ, ಮುಕ್ಕುಂದರೆಡ್ಡಿ, ಕೆ.ಪಿ. ಮಂಜುನಾಥರೆಡ್ಡಿ, ನಗರಸಭೆ ಪೌರಾಯುಕ್ತ ನಾಸೀರ್ ಅಲಿ, ಸದಸ್ಯರಾದ ಜಾಫರ್ ಜಗೀರದಾರ, ಪ್ರಭುರಾಜ, ಶಾಂತಮುತ್ತಯ್ಯ ಗುರುವಿನ್ ಮತ್ತಿತರರು ಇದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement