ರೈತ ಸಾವು: ಕುಟುಂಬಕ್ಕೆ ಪರಿಹಾರದ ಚೆಕ್
ರಾಯಚೂರು: ತಾಲೂಕಿನ ರಘುನಾಥನಹಳ್ಳಿ ಗ್ರಾಮದಲ್ಲಿ ಹಾವು ಕಚ್ಚಿ ಮೃತನಾದ ರೈತ ದಿ. ತಾಯಪ್ಪ ಎಂಬುವವರ ಸಂಬಂಧಿಗಳಿಗೆ ಇತ್ತೀಚೆಗೆ ಕೃಷಿ ಇಲಾಖೆಯಿಂದ 1 ಲಕ್ಷ ಪರಿಹಾರದ ಚೆಕ್ ವಿತರಿಸಲಾಯಿತು.
ತಾಯಪ್ಪ ಅವರು ಹೊಲದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದಾಗ ಹಾವು ಕಚ್ಚಿದ್ದು ಅದರಿಂದ ಅವರು ಮೃತರಾಗಿದ್ದರಿಂದ ಕೃಷಿ ಇಲಾಖೆ ವತಿಯಿಂದ 1 ಲಕ್ಷ ಪರಿಹಾರದ ಚೆಕ್ಅನ್ನು ಮೃತರ ಪತ್ನಿ ಶರಣಮ್ಮ ಎಂಬುವವರಿಗೆ ವಿತರಿಸಲಾಯಿತು.
ಶಾಸಕ ತಿಪ್ಪರಾಜು, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಡಾ. ಆರ್.ಜಿ.ಸಂದೀಪ್, ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಉದಯಕುಮಾರ, ರಘುನಾಥನಹಳ್ಳಿ ಗ್ರಾಮಸ್ಥರಿದ್ದರು.
--