ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿದ್ಯುದ್ದೀಕರಣ: ಜನತೆಗೆ ಎಚ್ಚರಿಕೆ

Lingaraj Badiger
Updated On : 5 Sept 2013, 10:56 am

ರಾಯಚೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಸಿಂಧನೂರು 110 ಕೆವಿ ವಿದ್ಯುತ್ ಉಪಕೇಂದ್ರದಿಂದ ಹಟ್ಟಿಯ 110 ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಸಂಪರ್ಕ ಮಾರ್ಗದಲ್ಲಿ ಸೆ.5ರಿಂದ ವಿದ್ಯುತ್ ಪೂರೈಕೆ ಮಾಡಲಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಸಿಂಧನೂರಿನಿಂದ ಹಟ್ಟಿಯವರೆಗಿನ ವಿದ್ಯುತ್ ಮಾರ್ಗವು ಪಾಮನಕಲ್ಲೂರು, ಗೆಜ್ಜಲಗಟ್ಟಾ, ಹಟ್ಟಿ, ನಿಲೋಗಲ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದ ಮೂಲಕ ಸಾಗುತ್ತಿದ್ದು, ಈ ಮಾರ್ಗವನ್ನು ಸೆ.5ರಿಂದ ವಿದ್ಯುದ್ದೀಕರಿಸಲಾಗುತ್ತದೆ. ಸಾರ್ವಜನಿಕರು ಈ ವಿದ್ಯುತ್ ಗೋಪುರಗಳನ್ನು ಹತ್ತುವುದು, ದನಕರುಗಳನ್ನು ಗೋಪುರಗಳಿಗೆ ಕಟ್ಟುವುದು, ಹಸಿರುಬಳ್ಳಿ ಅಥವಾ ಲೋಹದ ತಂತಿಗಳನ್ನು ಎಸೆಯುವ ಕಾರ್ಯ ಮಾಡುವಂತಿಲ್ಲ. ಹಾಗೊಂದು ವೇಳೆ ಈ ನಂತರದಲ್ಲಿ ಆಸ್ತಿಗೆ ಹಾಗೂ ಪ್ರಾಣ ಹಾನಿ ಸಂಭವಿಸಿದಲ್ಲಿ ಅದಕ್ಕೆ ಸಂಸ್ಥೆ ಹೊಣೆಯಾಗದು ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement