ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಂಬೇಡ್ಕರ್ ಫೋಟೋ ತೆರವು: ತಹಸೀಲ್ದಾರ್ ಅಮಾನತಿಗೆ ಆಗ್ರಹ

Vishwanath S
Updated On : 6 Sept 2013, 11:19 am

ಕನ್ನಡಪ್ರಭ ವಾರ್ತೆ  , ಔರಾದ್  , ಸೆ.5
ಜಿಲ್ಲೆಯ ಹುಮನಬಾದ ತಾಲೂಕಿನ ಸುಲ್ತಾನಬಾದ ವಾಡಿ ಗ್ರಾಮದಲ್ಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯ ಭವನದಲ್ಲಿನ ಡಾ.ಅಂಬೇಡ್ಕರ್ ಭಾವಚಿತ್ರ ತೆರವುಗೊಳಿಸಿ ಸಮುದಾಯ ಭವನಕ್ಕೆ ಬೀಗ ಜಡಿದ ತಹಸೀಲ್ದಾರ್ ಕ್ರಮ ಖಂಡಿಸಿ ರಿಪಬ್ಲಿಕನ್ ಸೇನೆಯ ಔರಾದ್ ಶಾಖೆ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಸೇನೆಯ ಅಧ್ಯಕ್ಷ ರಮೇಶ ತುಳಜಾಪೂರ ನೇತೃತ್ವದಲ್ಲಿ ತಾಲೂಕು ಉಪಾಧ್ಯಕ್ಷ ವಿಲಾಸ ಹಸನ್ಮುಖಿ, ಆನಂದ ಶೆಂಬೆಳ್ಳಿ, ಮಾರುತಿ ಗೌಡಗಾಂವ, ಮೋಗಲಪ್ಪಾ ಮಾಳಗೆ, ದತ್ತು ಸೇರಿದಂತೆ ಇನ್ನಿತರರು ತಹಸೀಲ್ದಾರ ಎಚ್. ವೆಂಕಣ್ಣಗೆ ಮನವಿ ಸಲ್ಲಿಸಿ, ಹುಮನಾಬಾದ್ ತಹಸೀಲ್ದಾರರು ದಲಿತ ವಿರೋಧಿ ಧೋರಣೆ ಅನುಸರಿಸುತಿದ್ದು ಸರಿಯಲ್ಲ. 25 ವರ್ಷಗಳ ಹಿಂದೆ ಸಮುದಾಯ ಭವನ ನಿರ್ಮಾಣ ಮಾಡಲಾಗಿತ್ತು ಎಂದಿದ್ದಾರೆ.
ಡಾ. ಅಂಬೇಡ್ಕರ್ ಜಯಂತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಸಮುದಾಯ ಭವನದಲ್ಲಿ ಜರುಗುತಿದ್ದವು. ಆದರೆ, ತಹಸೀಲ್ದಾರರು ಏಕಾಎಕಿ ಬಂದು ಯಾವುದೇ ಮುನ್ಸೂಚನೆ ನೀಡದೆ ಮೂರ್ತಿ ತೆರವುಗೊಳಿಸಿದ್ದಾರೆ. ತಹಸೀಲ್ದಾರ್‌ರನ್ನು 15 ದಿನದೊಳಗೆ ಸೇವೆಯಿಂದ ಅಮಾನತುಗೊಳಿಸಬೇಕು. ಇಲ್ಲದಿದ್ದರೆ ರಿಪಬ್ಲಿಕನ್ ಸೇನೆಯಿಂದ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement