'ಕ್ರಿಸ್ತನ ಕೃಪೆಗೆ ಪಾತ್ರರಾಗಿ'
ಸಿಂಧನೂರು: ಜನರ ಪಾಪಗಳಿಗಾಗಿ ಸಿಲುಬೆಯನ್ನೇರಿದ ಕ್ರಿಸ್ತನ ಅಪಾರ ಪ್ರೀತಿಯ ಗುಣವನ್ನರಿತು ಬಾಳಬೇಕೆಂದು ದೇವರ ಆಜ್ಞೆಯ ಅನುಸಾರ ಬಾಳಬೇಕು ಎಂದು ಬೈಬಲ್ ಮಿಷನ್ ಗವರ್ನಿಂಗ್ ರೆವರೆಂಡ್ ಪ್ರಕಾಶರಾವು ಹೇಳಿದರು.
ತಾಲೂಕಿನ 4ನೇ ಮೈಲ್ ಕ್ಯಾಂಪಿನ ಸುವರ್ಣ ಶೃಂಗಾರ ದೇವಾಲಯದಲ್ಲಿ ಕ್ರಿಸ್ತನ ಪುನರುತ್ಥಾನದ ಅಂಗವಾಗಿ ನಡೆದ ಮೂರು ದಿನದ ಸಭೆಗಳ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಳ್ಳಾರಿಯ ರೆ ಸುದರ್ಶನಂ, ಗಾಂಧೀನಗರದ ರೆ ವಿಜಯರತ್ನಂ, ಮಾನವಿಯ ರೆ ಮನೋಹರಂ, ಲಕ್ಷ್ಮೀಕ್ಯಾಂಪಿನ ರೆ ವರಪ್ರಸಾದ್, ರೆ ಪೀಟರ್, ರೆ ಜಿ.ಸ್ಯಾಮುಯೇಲ್ ಸಂದೇಶ ವಿವರಿಸಿದರು.
ಸಜೀವರಾಜು, ಮೇರಿ ಗ್ರೇಸ್, ಕೆ.ಸೂರ್ಯವತಿ, ಎಂ. ಕುಮಾರಿ, ಕೆ.ಕೃಷ್ಣಾರಾವು, ಆಗಮನರಾಜು, ಕುಮಾರ್, ಆನಂದ್, ರಾಜು ಹಾಗೂ ಸಂಘದ ಸದಸ್ಯರು ಹಾಜರಿದ್ದರು. ಮೂರು ದಿನಗಳ ದೈವೀ ಸಭೆಗಳಿಗೆ ಸತ್ಯನಾರಾಯಣಕ್ಯಾಂಪ್, ಮಲ್ಲದಗುಡ್ಡ, ಗೀತಾಕ್ಯಾಂಪ್, ಶಹಪುರ, ಗಾಂಧೀನಗರ, ಹಂಚಿನಾಳಕ್ಯಾಂಪ್, 3ನೇ ಮೈಲ್ ಕ್ಯಾಂಪ್, ವಿರುಪಾಪುರು ಸೇರಿದಂತೆ ಹಲವೆಡೆಯಿಂದ ಭಕ್ತ ಸಮೂಹ ಹರಿದು ಬಂದಿದ್ದು ವಿಶೇಷವಾಗಿತ್ತು.