ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಚತುರ್ಥಿ: ಧ್ವನಿವರ್ಧಕ ಬಳಕೆ ನಿಷೇಧ

Lingaraj Badiger
Updated On : 7 Sept 2013, 10:50 am

ಯಾದಗಿರಿ:  ಸೆ.9ರಿಂದ ಆಚರಿಸಲಾಗುವ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುವಂತೆ ಮತ್ತು ಶಬ್ಧಮಾಲಿನ್ಯ ತಡೆಯಲು ಹೆಚ್ಚಿನ ಶಬ್ಧಮಾಲಿನ್ಯ ಉಂಟುಮಾಡುವ ಸಮೂಹ ಧ್ವನಿವರ್ಧಕಗಳ ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಆದೇಶಿಸಿದ್ದಾರೆ. ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳಲ್ಲಿ ಶಬ್ಧಮಾಲಿನ್ಯ ಉಂಟು ಮಾಡುವ ಧ್ವನಿವರ್ಧಕಗಳನ್ನು ಬಳಕೆ ಮಾಡಬಾರದು. ಸೆ.9ರಿಂದ 20 ರವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
--
ಮುರಾರಿ ಕಾಂಗ್ರೆಸ್ ಸೇರ್ಪಡೆ
ಲಿಂಗಸ್ಗೂರು: ತಾಲೂಕಿನ ಮಸ್ಕಿ ಕ್ಷೇತ್ರದ ಜಿಪಂ ಸದಸ್ಯ ಹಾಗೂ ಕೆಜೆಪಿ ಮುಖಂಡ ಎಚ್.ಬಿ. ಮುರಾರಿ ಹಾಗೂ ಮುಖಂಡರಾದ ದೊಡ್ಡಬಸಪ್ಪ ಅಂಗಡಿ, ಶರಣಗೌಡ ಬಸಾಪೂರ, ರಮೇಶ ಶಾಸ್ತ್ರಿ ಸೇರಿದಂತೆ ಹಲವಾರು ಮುಖಂಡರು ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಅವರ ಸಮ್ಮುಖದಲ್ಲಿ ಶುಕ್ರವಾರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಪಾಟೀಲ್, ಮುಖಂಡರಾದ ಡಿ.ಎಸ್. ಹೂಲಗೇರಿ, ಲಾಲಅಹ್ಮದ್‌ಸಾಬ, ಗುಂಡಪ್ಪ ನಾಯಕ, ಖಾದರಪಾಶಾ, ಹನುಮಂತಪ್ಪ ತೊಗರಿ, ಮಲ್ಲಣ್ಣ ವಾರದ, ನಾಗರಾಜ ತಿಪ್ಪಣ್ಣ ಸೇರಿದಂತೆ ನೂರಾರು ಜನ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement