ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಾಳೆ ವಿಭಾಗ ಮಟ್ಟದ ಶಿಕ್ಷಕರ ದಿನಾಚರಣೆ

Lingaraj Badiger
Updated On : 7 Sept 2013, 10:56 am

ರಾಯಚೂರು: ನಗರದ ಕಲಾಸಂಕುಲ ಸಂಸ್ಥೆಯಿಂದ ಸೆ.8ರಂದು ಗುಲ್ಬರ್ಗಾ ವಿಭಾಗ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ನಗರದ ರಂಗಮಂದಿರದಲ್ಲಿ ಬೆಳಗ್ಗೆ 11ಕ್ಕೆ ಸಮಾರಂಭವನ್ನು ಸಾಹಿತಿ ಪುಸ್ತಕಮನೆ ಹರಿಹರಪ್ರಿಯ ಉದ್ಘಾಟಿಸಲಿದ್ದು, ಸಾನ್ನಿಧ್ಯ ಶ್ರೀನಾಗಲಿಂಗ ಮಠದ ಶ್ರೀಸೂರ್ಯನಾರಾಯಣ ಸ್ವಾಮೀಜಿ ವಹಿಸುವರು. ಶಾಸಕ ತಿಪ್ಪರಾಜು ಹವಾಲ್ದಾರ್ ಅವರಿಗೆ ಈ ವೇಳೆ ಸನ್ಮಾನಿಸಲಾಗುತ್ತದೆ. ಅಧ್ಯಕ್ಷತೆ ದೇವದುರ್ಗ ಶಾಸಕ ವೆಂಕಟೇಶ ನಾಯಕ ವಹಿಸುವರು. ಶಿಕ್ಷಕ ರತ್ನ ಪ್ರಶಸ್ತಿಗಳನ್ನು ಗುಲ್ಬರ್ಗ ವಿವಿ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಪ್ರದಾನ ಮಾಡಲಿದ್ದಾರೆ. ಶಾಸಕ ಡಾ. ಶಿವರಾಜ್ ಪಾಟೀಲ್, ಸಿಪಿಐ ರಮೇಶ್ ಮೇಟಿ, ಜಗದೀಶ್ ವಕೀಲರು, ನಗರಸಭೆ ಸದಸ್ಯ ಎಂ.ಪವನ್ ಕುಮಾರ್ ಪಾಲ್ಗೊಳ್ಳಲಿದ್ದಾರೆ.
ಹಾಜಿಮಲಂಗಗೆ ರಾಷ್ಟ್ರ ಪ್ರಶಸ್ತಿ ಪ್ರದಾನ
ಮುದಗಲ್: ಸಮೀಪದ ಆದಾಪುರ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಗುರು ಹಾಜಿಮಲಂಗ ಬಾಬಾ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿದರು. ಗುರುವಾರ ದೇಹಲಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆ, ಡಾ.ರಾಧಾಕೃಷ್ಣನ್ ಜಯಂತಿ ಕಾರ್ಯಕ್ರಮದಲ್ಲಿ ನೀಡುವ ರಾಷ್ಟ್ರ ಪ್ರಶಸ್ತಿಗೆ ಹಾಜಿಮಲಂಗ ಬಾಬಾ ಆಯ್ಕೆಯಾಗಿದ್ದರು. ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಅವರು ಶಿಕ್ಷಕ ವೃತ್ತಿ ಜೀವಮಾನದಲ್ಲಿ ಶ್ರೇಷ್ಠವಾದದು. ಉತ್ತಮ ಸೇವೆ, ಶ್ರದ್ಧೆ ಇದ್ದರೆ ಪ್ರತಿಫಲ ಸಿಗುತ್ತದೆ ಎಂದರು.
ಶಿಕ್ಷಕರ ದಿನಾಚರಣೆ
ರಾಯಚೂರು: ನಗರದ ಗಾಂಧಿ ಸ್ಮಾರಕ ಕಲಾ ಮತ್ತು ಶಿಕ್ಷಣ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಶಿಕ್ಷಕರ ದಿನಾಚರಣೆ ಮತ್ತು ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಆಯೋಜಿಸಲಾಗಿತ್ತು. ರಾಯಚೂರು ವೆಲ್ಫೇರ್ ಟ್ರಸ್ಟ್‌ನ ಆಡಳಿತಾಧಿಕಾರಿ ಆರ್.ಎಚ್.ಸಾಗರ್ ಮಾತನಾಡಿದರು. ಕಾರ್ಯದರ್ಶಿ ಸೀತಾರಾಂ ಇದ್ದರು. ಅಧ್ಯಕ್ಷತೆ ಪ್ರಾಚಾರ್ಯ ವೀರೇಂದ್ರಕುಮಾರ್ ವಹಿಸಿದ್ದರು. ಉಪನ್ಯಾಸಕರಾದ ಸುರೇಶ್ ಸಾಲಿಮಠ, ತಾಯಪ್ಪ ಮನ್ಸಲಾಪೂರ, ಮೌನೇಶ್, ಮಹಮದ್, ಕಾಲೇಜಿನ ವಿದ್ಯಾರ್ಥಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement