ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಲಿಂಗನಹಳ್ಳಿ ತಾಂಡಾ: ಬೋನಿಗೆ ಬಿದ್ದ ಚಿರತೆ

Mainashree
Updated On : 7 Sept 2013, 11:03 am

ಕೂಡ್ಲಿಗಿ: ಹಲವಾರು ದಿನಗಳಿಂದ ಕೋಳಿ, ದನಕರುಗಳನ್ನು ತಿನ್ನುತ್ತಾ ಗ್ರಾಮಸ್ಥರಲ್ಲಿ ಭಯ ಮೂಡಿಸಿದ್ದ ಚಿರತೆಯನ್ನು ಅರಣ್ಯ ಅಧಿಕಾರಿಗಳು ಶನಿವಾರ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಲಿಂಗನಹಳ್ಳಿ ತಾಂಡಾದಲ್ಲಿ ಬೋನಿಗೆ ಕೆಡವಿದ್ದಾರೆ.
ಪ್ರತಿದಿನ ರಾತ್ರಿ ಬೆಟ್ಟಗುಡ್ಡಗಳ ತಪ್ಪಲಿನ ಲಿಂಗನಹಳ್ಳಿ ತಾಂಡಾಕ್ಕೆ ಬರುತ್ತಿದ್ದ ಚಿರತೆ, ತಾಂಡಾದ ಕೋಳಿಗಳನ್ನು ತಿಂದು ಬೆಳಗಾಗುವುದರೊಳಗೆ ಊರು ಖಾಲಿ ಮಾಡುತ್ತಿತ್ತು. ಚಿರತೆ ಸೆರೆಹಿಡಿಯಲು ಗ್ರಾಮದ ಯುವಕರ ಒತ್ತಾಯದ ಮೇರೆಗೆ ಕೂಡ್ಲಿಗಿ ವಲಯ ಅರಣ್ಯಾಧಿಕಾರಿ ಹೂವಿನಹಡಗಲಿಯಲ್ಲಿದ್ದ ಚಿರತೆ ಬೋನನ್ನು ತಾಂಡಾಕ್ಕೆ ತರಲು ವ್ಯವಸ್ಥೆ ಮಾಡಿದ್ದರು.
ನಂತರ ಬೋನಿನಲ್ಲಿ ಕೋಳಿಗಳನ್ನು ಇಡಲಾಗಿದೆ. ಇದನ್ನು ತಿನ್ನಲು ಬಂದ ಚಿರತೆ ಬೋನಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಬೋನಿನಿಂದ ತಪ್ಪಿಸಿಕೊಳ್ಳಲು ಚಿರತೆ ಪರದಾಡಿದಾಗ ಮುಖ, ಮುಂತಾದ ಭಾಗಗಳಲ್ಲಿ ಗಾಯವಾಗಿದೆ. ನಂತರ ಸೆರೆಸಿಕ್ಕ ಚಿರತೆಯನ್ನು ಅರಣ್ಯ ಅಧಿಕಾರಿಗಳು ದಾಂಡೇಲಿ ಅರಣ್ಯಕ್ಕೆ ಸಾಗಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement