15ರಂದು ಆರೋಗ್ಯ ತಪಾಸಣೆ ಶಿಬಿರ
ರಾಯಚೂರು: ನಗರದ ಇನ್ನರ್ ವೀಲ್ ಕ್ಲಬ್ ಮತ್ತು ಬೆಂಗಳೂರಿನ ಅಪೋಲೋ ಆಸ್ಪತ್ರೆಯ ಸಹಯೋಗದಲ್ಲಿ ಸೆ.15ರಂದು ಸೂಪರ್ ಸ್ಪೆಷಾಲಿಟಿ ಆರೋಗ್ಯ ತಪಾಸಣೆಯ ಉಚಿತ ಶಿಬಿರ ಆಯೋಜಿಸಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಕ್ಲಬ್ನ ಅಧ್ಯಕ್ಷೆ ಸುಷ್ಮಾ ಪತಂಗೆ ಮತ್ತು ಕಾರ್ಯದರ್ಶಿ ಅರ್ಚನಾ ಪಾಧ್ಯೆ ಅವರು, ಅಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 3ರವರೆಗೆ ನಗರದ ಬೂಬ್ ಭವನದಲ್ಲಿ ಆರೋಗ್ಯದ ತಪಾಸಣೆ ಶಿಬಿರ ನಡೆಯಲಿದ್ದು, ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಉದ್ಘಾಟಿಸಲಿದ್ದಾರೆಂದು ತಿಳಿಸಿದ್ದಾರೆ. ಶಿಬಿರದಲ್ಲಿ ತಜ್ಞ ವೈದ್ಯರು ವಿವಿಧ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಸೇವೆಗಳನ್ನು ನೀಡಲಿದ್ದಾರೆಂದು ತಿಳಿಸಿದ್ದು, ಹೆಚ್ಚಿನ ಮಾಹಿತಿಗೆ ರಿದಂ ಹೌಸ್-9448192965, ರಾಯಚೂರು ಮೆಡಿಕಲ್ಸ್ 9902693365, ಆರ್. ರಾಜಪುರೋಹಿತ್- 7899385450 ಇಲ್ಲಿಗೆ ಸಂಪರ್ಕಿಸಲು ಕೋರಿದ್ದಾರೆ.