ಕ್ಯಾರಿಓವರ್ಗೆ ಒತ್ತಾಯಿಸಿ ಇಂದು ರಸ್ತೆ ತಡೆ
ಗುಲ್ಬರ್ಗ: ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಸುಗಮವಾಗಿ ಹೋಗಲು ಮತ್ತು ತಮ್ಮ ಕೋರ್ಸ್ನ್ನು ಪೂರ್ಣಗೊಳಿಸಿಕೊಂಡು ಉದ್ಯೋಗ ಅವಕಾಶ ಪಡೆಯಲು ಸರ್ಕಾರ ತಕ್ಷಣ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಕ್ಯಾರಿಓವರ್ ಪದ್ಧತಿ ಜಾರಿಗೆ ತರಬೇಕೆಂದು ಒತ್ತಾಯಿಸಿ ಸೆ.12 ರಂದು ಬೆಳಗ್ಗೆ ಆಯಾ ಕಾಲೇಜುಗಳ ವಿದ್ಯಾರ್ಥಿಗಳು ಪಟೇಲ್ ವೃತ್ತದಲ್ಲಿ ಸಮಾವೇಶಗೊಂಡು ರಸ್ತೆ ತಡೆ ಚಳವಳಿ ನಡೆಸಲಾಗುವುದು ಎಂದು ಹೈದರಾಬಾದ್ ಕರ್ನಾಟಕ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಒಕ್ಕೂಟ ತಿಳಿಸಿದೆ.
ಜಿಲ್ಲೆಯ ಎಲ್ಲ ಪಾಲಿಟೆಕ್ನಿಕ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಸೈಯದ್ ಅಲ್ಲಾವುದ್ದೀನ್ ಖಾದ್ರಿ, ದೀಪಕ, ಮೊಹ್ಮದ್, ಸುನೀಲ್ ಕೋರಿದ್ದಾರೆ.