ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಗಂಗಾಮತಸ್ಥ ನೌಕರರ ಸಭೆ ಯಶಸ್ವಿ

Rashmi Kasaragodu
Updated On : 12 Sept 2013, 12:14 pm

ಸಿಂಧನೂರು: ನಗರದ ಗಂಗಾಮತಸ್ಥ ಸಮುದಾಯ ಭವನದಲ್ಲಿ ಇತ್ತೀಚೆಗೆ ಗಂಗಾಮತಸ್ಥ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್ ಸಭೆ ಜರುಗಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಕೆ.ರಂಗನಾಥ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಂಗಾಮತಸ್ಥ ನೌಕರರು ಸಂಘಟಿತರಾಗುವಂತೆ ಕರೆ ನೀಡಿದರು. ಸಂಘದ ಜಿಲ್ಲಾ ಮುಖಂಡ ಸಾಯಿಬಣ್ಣ, ಸಮಾಜದ ಹಿರಿಯ ಮುಖಂಡ ಬಸಣ್ಣ ಕರಡಕಲ್, ನೌಕರರ ಟ್ರಸ್ಟ್ ತಾಲೂಕಾಧ್ಯಕ್ಷ ಈರಣ್ಣ ಜಿಂಗದ್, ಗೌರವಾಧ್ಯಕ್ಷ ಬಸಣ್ಣ ತುರ್ವಿಹಾಳ, ಸಂಘಟನಾ ಕಾರ್ಯದರ್ಶಿಗಳಾದ ಪಂಪಾಪತಿ, ಬಸವರಾಜ ಅಂಬಿಗೇರ್, ಪ್ರಧಾನ ಕಾರ್ಯದರ್ಶಿ ಮಂಜುನಾಥ ತೂಗೇಮನಿ, ಶಿಕ್ಷಕ ಕೆ.ಮಲ್ಲಪ್ಪ ಹಂಚಿ, ಸಂಚಾಲಕ ಕೆ.ಬಾಳಪ್ಪ ಭಾಗವಹಿಸಿದ್ದರು.
ಹಣ ವಸೂಲಿ: ಕ್ರಮಕ್ಕೆ ಗ್ರಾಮಸ್ಥರ ಆಗ್ರಹ
ಸಿಂಧನೂರು: ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಆಧಾರ್ ಕಾರ್ಡ್ನ್ನು ಉಚಿತವಾಗಿ ವಿತರಿಸಬೇಕೆಂಬ ನಿಯಮವಿದ್ದರೂ ನಗರದ ಲಕ್ಷ್ಮೀ ಕ್ಯಾಂಪಿನ ಆಧಾರ್ ಕೇಂದ್ರದಲ್ಲಿ ಒಂದು ಅರ್ಜಿಗೆ 10 ವಸೂಲಿ ಮಾಡಲಾಗುತ್ತಿದೆ. ಕಾರಣ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಾರ್ಡ್ನ ನಿವಾಸಿಗಳಾದ ದೇವೇಂದ್ರ, ರವಿ, ಹನುಮೇಶ ಮನವಿ ಮಾಡಿದ್ದಾರೆ.
14ರಿಂದ ವಿವಿಧ ಸ್ಪರ್ಧೆಗಳು
ರಾಯಚೂರು: ಭಾರತ ವಿಕಾಸ ಪರಿಷತ್ನಿಂದ ನಗರದಲ್ಲಿ ಸೆ.14 ಮತ್ತು 15ರಂದು ರಾಷ್ಟ್ರೀಯ ಸಮೂಹ ಗಾಯನ ಮತ್ತು ಬಹು ಆಯ್ಕೆಯ ಲಿಖಿತ ಸ್ಪರ್ಧೆ ಆಯೋಜಿಸಲಾಗಿದೆ. ನಗರದಲ್ಲಿ ಸೆ.14ರಂದು ಮಧ್ಯಾಹ್ನ 3ಕ್ಕೆ ಕಿರಿಯರ ವಿಭಾಗದಲ್ಲಿ 8ನೇ ತರಗತಿ ವಿದ್ಯಾರ್ಥಿಗಳಿಗೆ ಸಮೂಹ ಗಾಯನ ಸ್ಪರ್ಧೆ ನಡೆಯಲಿದೆ. ಸೆ. 15ರಂದು ಹಿರಿಯರ ವಿಭಾಗದಲ್ಲಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಪರ್ಧೆ ನಡೆಯಲಿದ್ದು, ನಗರದ ವಿದ್ಯಾಭಾರತಿ ಶಿಕ್ಷಣ ಕೇಂದ್ರದಲ್ಲಿ ಆಯೋಜಿಸಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು ಎಂದು ಪರಿಷತ್ ತಿಳಿಸಿದೆ.
ಸಮಿತಿಗೆ ನೇಮಕ
ರಾಯಚೂರು: ವಲಯ ರೇಲ್ವೆ ಬಳಕೆದಾರರ ಸಲಹಾ ಸಮಿತಿಗೆ ಜಿಲ್ಲಾ ಕಾಂಗ್ರೆಸ್ ಮುಖಂಡ ಅಮರೇಗೌಡ ಹಂಚಿನಾಳ ನೇಮಕಗೊಂಡಿದ್ದಾರೆ.ಈ ಕುರಿತು ದಕ್ಷಿಣಪಶ್ಚಿಮ ರೇಲ್ವೆ ಡಿಜಿಎಂ ಸಿ.ಎಸ್.ಗುಪ್ತಾ ಅವರು ಆದೇಶ ಹೊರಡಿಸಿದ್ದು, ಈಚೆಗೆ ಪುನಾರಚಿಸಿದ ವಲಯ ರೇಲ್ವೆ ಬಳಕೆದಾರರ ಸಲಹಾ ಸಮಿತಿಗೆ 2013ರ ಮಾರ್ಚ್ 1ರಿಂದ 2015ರ ಫೆ. 28ರವರೆಗಿನ ಅವಧಿಗೆ ಅಮರೇಗೌಡ ಹಂಚಿನಾಳ ಅವರನ್ನು ನೇಮಿಸಿರುವುದಾಗಿ ಪ್ರಕಟಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement