ನಾಡಿಗೆ ಬಸವಣ್ಣ ಕೊಡುಗೆ ಅಪಾರ: ಸತ್ಯಂಪೇಟ್
ಜೇವರ್ಗಿ: ಮೂಢನಂಬಿಕೆ ಕಂದಾಚಾರಗಳನ್ನು ತೊಡೆದು ಹಾಕಿ ಅಂದಕಾರದಲ್ಲಿದ್ದ ಜನತೆಯನ್ನು ಕತ್ತಲೆಯಿಂದ ಬೆಳಕಿನಡೆಗೆ ತರುವುದರ ಮೂಲಕ ಬಸವಣ್ಣ ನಾಡಿಗೆ ತಮ್ಮದೆಯಾದ ಕೊಡುಗೆ ನೀಡಿದಾರೆಂದು ಬಸವಮಾರ್ಗ ಪತ್ರಿಕೆ ಸಂಪಾದಕ ವಿಶ್ವರಾಧ್ಯ ಸತ್ಯಂಪೇಟ್ ಅಭಿಪ್ರಾಯಪಟ್ಟರು.
ತಾಲೂಕಿನ ಕಲ್ಲಹಂಗರಗಾ ಗ್ರಾಮದಲ್ಲಿ ದಿ. ದೊಡ್ಡಪ್ಪಗೌಡ ಪೊಲೀಸ್ ಪಾಟೀಲ್ ಸ್ಮರಣಾರ್ಥ ಆಯೋಜಿಸಲಾಗಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿಗೂ ಬಸವಣ್ಣನವರು ಸ್ಥಾಪಿಸಿದ ವೀರಶೈವ ಲಿಂಗಾಯಿತ ಧರ್ಮ ಇದು ಜಾತಿಗೆ ಸೀಮಿತವಾದದಲ್ಲ. ಈ ಧರ್ಮ ಎಲ್ಲ ಜಾತಿಯ ಜನಾಂಗದ ಹೂದೋಟ ಎಂದ ಅವರು, ಬಸವಣ್ಣನವರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೆಯಾದರೇ ನಮ್ಮ ಜೀವನ ಸಾರ್ಥಕವಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಶಿವಣ್ಣಗೌಡ ಹಂಗರಗಿ, ಚಂದ್ರಶೇಖರ ಸೀರಿ, ಗಿರೇಪ್ಪಗೌಡ ಪಾಟೀಲ್ ಕಲ್ಲಹಂಗರಗಾ, ಅಶೋಕ ಪಾಟೀಲ್, ಎಸ್.ಎಸ್. ಸಲಗಾರ, ವಿಜಯಕುಮಾರ್ ಬಿರಾದಾರ, ಈರಣ್ಣ ಭೂತಪುರ, ಅಪ್ಪಾಸಾಬ್ ಹೊಸ್ಮನಿ, ನಿಂಗಣ್ಣ ಕುಂಬಾರ ಉಪಸ್ಥಿತರಿದ್ದರು.
ಡಾ. ಸುಜಾತಾ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಬಾಬುಗೌಡ ಪಾಟೀಲ್ ಸ್ವಾಗತಿಸಿದರು. ವಿಜಯಕುಮಾರ್ ಪಾಟೀಲ ವಂದಿಸಿದರು.
ಪವಿತ್ರಾ ವಚನ ಗಾಯನ ಮಾಡಿದರು. ಇದೇ ಸಂದರ್ಭದಲ್ಲಿ ಕಳೆದ 15 ವರ್ಷಗಳಿಂದ ಬಸವ ವಚನಗಳನ್ನು ಬಿತ್ತರಿಸುತ್ತಿರುವ ಬಸವಕೇಂದ್ರ ತಾಲೂಕಾಧ್ಯಕ್ಷ ಶರಣಬಸವ ಕಲ್ಲಾ ಅವರನ್ನು ಕಲ್ಲಹಂಗರಗಾ ಗ್ರಾಮದ ವಿಜಯಕುಮಾರ್ ಪಾಟೀಲ್ ಸನ್ಮಾನಿಸಿ ಗೌರವಿಸಿದರು.