ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ನಿಮ್ಮ ಹಣೆಬರಹ ನಿಮ್ಮ ಕೈಯಲ್ಲಿದೆ'

Rashmi Kasaragodu
Updated On : 12 Sept 2013, 12:14 pm

ಚಿತ್ತಾಪುರ: ನಮ್ಮ ಯಶ್ವಸಿಗೆ ನಾವೇ ಕಾರಣರು ಬೇರೆ ಯಾರು ಅಲ್ಲ ಎಂಬುದನ್ನು ತಿಳಿದು ಜೀವನದಲ್ಲಿ ಬೃಹತ್ ಯೋಜನೆಗಳು ಹಾಕಿಕೊಂಡು ನಿರಾಸೆಯಾಗದೆ ಸತತ ಪ್ರಯತ್ನಿಸಬೇಕು ಎಂದು ಬೆಂಗಳೂರಿನ ಪರಿಮಳ ಕನ್ಸಲೆಟಿನ್ಸಿ ನಿರ್ದೇಶಕ ಗುರುರಾಜ ಕುಲಕರ್ಣಿ ಹೇಳಿದರು.
ತಾಲೂಕಿನ ರಾವೂರ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಹಾಗೂ ಸೇಡಂ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆ ಹಾಗೂ ವಿಕಾಸ ಆಕಾಡೆಮಿ ಹಮ್ಮಿಕೊಂಡ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಎಂಬ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಇದು ನನ್ನ ಹಣೆಬರಹ ಎಂದು ಗೋಣಗುವುದು ಬಿಟ್ಟು ನನ್ನ ಹಣೆಬರಹ ನನ್ನ ಕೈಯಲ್ಲಿದೆ ಎಂದು ತಿಳಿದು ಜೀವನದ ಯಶಸ್ಸಿಗೆ ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಸಂಸ್ಥೆಯ ಆಡಳಿತಾಧಿಕಾರಿ ಡಾ. ಗುಂಡಣ್ಣ ಬಾಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಕಾಸ ಅಕಾಡಮಿ ಸಂಯೋಜಕ ಪಿ. ಭೀಮರಡ್ಡಿ ಹಾಗೂ ಸೇಡಂ ಸಂಯೋಜಕ ಸಿದ್ದಪ್ಪ ತಳ್ಳಳ್ಳಿ, ಶಿವಯ್ಯ ಮಠಪತಿ, ನಾಗೇಶ ಮೇಂಗಜಿ, ವಿದ್ಯಾಭಾರತಿ ಜಿಲ್ಲಾಧ್ಯಕ್ಷ ಚಂದ್ರಶೇಖರ ದಿಗ್ಗಾಂವಕರ್, ದೇವಿಂದ್ರ ತಳವಾರ, ವೀರೂಪಾಕ್ಷಯ್ಯ ಸ್ವಾಮಿ, ಅಕ್ಕನ ಬಳಗದ ಮಹಿಳೆಯರು, ಯುವಕರು ಉಪಸ್ಥಿತರಿದ್ದರು. ಶರಣು ಜ್ಯೋತಿ ಸ್ವಾಗತಿಸಿದರು. ಬಸವರಾಜ ಬಳವಾಟ ನಿರೂಪಿಸಿ ಸಿದ್ದಲಿಂಗ ಬಾಳಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement