ಮುದಗಲ್ನಲ್ಲಿ ಗಣೇಶೋತ್ಸವ ಸಂಭ್ರಮ
ಮುದಗಲ್: ಪಟ್ಟಣದ ವಿವಿಧೆಡೆ ಗಣೇಶ ವಿಗ್ರಹಗಳನ್ನು ಮೆರವಣಿಗೆಯ ಮೂಲಕ ತಾವು ನಿಗದಿಪಡಿಸಿದ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು.
ಸಾರ್ವಜನಿಕವಾಗಿ ಪಪಂ ಆವರಣದಲ್ಲಿ ದುಷ್ಟಕೂಟಗಳನ್ನು ನಿಯಂತ್ರಿಸುವ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸಿದರೆ, ಪಟ್ಟಣದ ವಿವಿಧೆಡೆ ವಿವಿಧ ರೀತಿಯ ಭಂಗಿಯ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದು, ಸೇವಾಕರ್ತರು ಮತ್ತು ಕಾರ್ಯಕರ್ತರು ಪೂಜಿಸಿದ್ದಾರೆ.
ವೆಂಕಟರಾಯನಪೇಟೆ, ಕಿಲ್ಲಾದ ರಾಮಲಿಂಗೇಶ್ವರ ದೇವಸ್ಥಾನ, ಇಬ್ರಾಹಿಂಪುರ ಪೇಟೆ, ಜಾಡರ ಪೇಟೆ ಸೇರಿದಂತೆ ವಿವಿಧೆಡೆ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.