ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಯಡಿಯೂರಪ್ಪ, ಈಶ್ವರಪ್ಪ ಒಗ್ಗೂಡವಿಕೆ ಖಚಿತ: ನಮೋಶಿ

Rashmi Kasaragodu
Updated On : 12 Sept 2013, 12:13 pm

ಸಿಂಧನೂರು: ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಲೋಕಸಭೆ ಚುನಾವಣೆಯೊಳಗೆ ಒಂದಾಗುವುದು ಖಚಿತ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಭವಿಷ್ಯ ನುಡಿದರು.
ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ತಾವು ಕಳೆದ ನಾಲ್ಕು ದಿನಗಳ ಹಿಂದೆ ಮತ್ತೆ ಮಾತೃಪಕ್ಷ ಬಿಜೆಪಿಗೆ ಬಂದಿದ್ದೇನೆ. ದೊಡ್ಡವರ ಬಗ್ಗೆ ಮಾತನಾಡುವುದು ಸರಿಯಲ್ಲ. ಆದರೂ ಈ ಹೊಂದಾಣಿಕೆ ಕೇವಲ ಶಿವಮೊಗ್ಗ ನಗರಸಭೆಗೆ ಮಾತ್ರ ಸೀಮಿತವಲ್ಲ. ಲೋಕಸಭೆ ಚುನಾವಣೆಯೊಳಗೆ ಇಬ್ಬರು ಒಂದಾಗಿ ಚುನಾವಣೆಗಳನ್ನು ಎದುರಿಸುತ್ತಾರೆ ಎಂದರು.
ಬಿಜೆಪಿಯ ಮುಖಂಡರ ಭಿನ್ನಾಭಿಪ್ರಾಯ ಮತ್ತು ಆಂತರಿಕ ಒಳ ಜಗಳಗಳಿಂದಾಗಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರಿತು. ಒಂದು ವೇಳೆ ಬಿಎಸ್ವೈ, ಈಶ್ವರಪ್ಪ, ಶ್ರೀರಾಮುಲು ಎಲ್ಲರೂ ಒಂದಾಗಿ ಚುನಾವಣೆಗಳನ್ನು ಎದುರಿಸಿದರೆ ಅಧಿಕಾರಕ್ಕೆ ಬರದಿದ್ದರೂ ಹೆಚ್ಚಿನ ಸೀಟುಗಳನ್ನು ಪಕ್ಷ ಗೆಲ್ಲುತ್ತಿತ್ತು. ತಮಗೂ ಆಗ ಪಕ್ಷದ ಮುಖಂಡರು ಮಾತು ಕೊಟ್ಟಂತೆ ನಡೆದುಕೊಳ್ಳಲು ವಿಫಲರಾದ ಕಾರಣ ಅನಿವಾರ್ಯವಾಗಿ ಜೆಡಿಎಸ್ಗೆ ಹೋಗಬೇಕಾಯಿತು ಎಂದು ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement