ಶಾಂತಿಸಭೆಯಲ್ಲಿ ಸಲಹೆ, ಸೂಚನೆ
ಸಿಂಧನೂರು: ಗಣೇಶ ಹಬ್ಬದ ಅಂಗವಾಗಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮ ಮತ್ತು ಕ್ಯಾಂಪ್ಗಳಲ್ಲಿ ಗಣೇಶಮೂರ್ತಿ ಸ್ಥಾಪನಾ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮತ್ತು ಮುಖ್ಯಸ್ಥರಿಗೆ ನಗರದ ಗ್ರಾಮೀಣ ಠಾಣೆಯಲ್ಲಿ ಸಭೆ ಕರೆದು ಸಲಹೆ ಸೂಚನೆಗಳನ್ನು ನೀಡಲಾಯಿತು.
ಗ್ರಾಮೀಣ ಠಾಣೆಯ ಪಿಎಸ್ಐ ಎಸ್.ಎಂ.ಪಾಟೀಲ್ ಗಣೇಶ ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ನೋಡಬೇಕು. ಅಂತಹ ಯಾವುದೇ ಘಟನೆಗಳು ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡಬೇಕು. ಸಹೋದರತ್ವ, ಭಾತೃತ್ವ ಮತ್ತು ಐಕ್ಯತೆಯ ದೃಷ್ಟಿಕೋನದಿಂದ ಹಬ್ಬವನ್ನು ಆಚರಿಸುವಂತೆ ಸಲಹೆ ನೀಡಿದರು. ಈ ವೇಳೆ ವಿವಿಧ ಗ್ರಾಮ ಮತ್ತು ಕ್ಯಾಂಪ್ಗಳ ಪ್ರತಿನಿಧಿಗಳು ಭಾಗವಹಿಸಿದ್ದರು.