ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸುಸಂಸ್ಕೃತ ಜೀವನ ನಡೆಸಿ: ಶಿವಕುಮಾರ್

Rashmi Kasaragodu
Updated On : 12 Sept 2013, 12:14 pm

ಗುಲ್ಬರ್ಗ: ಪರಮಾತ್ಮ ನೀಡಿರುವ ಈ ದೇಹ ಮತ್ತು ಜೀವ ಅಮೂಲ್ಯವಾದದ್ದು, ಮನಬಂದಂತೆ ವರ್ತಿಸಿ ಹಾಳು ಮಾಡಿಕೊಳ್ಳುವ ಬದಲು ನಿಯಮಿತ ಆಹಾರ, ಸುಸಂಸ್ಕೃತ ಜೀವನ ಶೈಲಿಯಿಂದ ಬದುಕನ್ನು ಹಸನಗೊಳಿಸಬೇಕು ಎಂದು ಬೀದರ್ನ ಶಿವಕುಮಾರ್ ಸ್ವಾಮೀಜಿ ಹೇಳಿದರು.
ವಿದ್ಯಾನಗರದ ವೆಲ್ಫೇರ್ ಸೊಸೈಟಿ ವತಿಯಿಂದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆದ ಸಿದ್ದಾರೂಢ ಮಹಾಸ್ವಾಮಿಗಳ ಪುರಾಣ ಮುಕ್ತಾಯ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಾನವ ಆಹಾರಕ್ಕಿಂತಲೂ ಹೆಚ್ಚಾಗಿ ಔಷಧಿಯನ್ನೇ ಸೇವಿಸುತ್ತಿದ್ದಾನೆ. ಈ ಔಷಧಿಗಳು ಹಾಳಾದ ಆರೋಗ್ಯವನ್ನು ಕಾಪಾಡುವ ಬದಲು ಮತ್ತಷ್ಟು ಕೆಡಿಸುವ ಸಾಧ್ಯತೆ ಇದೆ. ಆಹಾರ ಸೇವಿಸುವ ವಿಷಯದಲ್ಲಿ ಮಾನವ ಪ್ರಾಣಿಗಳಿಗಿಂತ ಕೆಳಗಿನ ಮಟ್ಟದಲ್ಲಿದ್ದಾನೆ. ಪರಮಾತ್ಮ ನಮಗೆ ಕೇವಲ ಜೀವಿಸುವುದಕ್ಕೆ ದೇಹ ಕೊಟ್ಟಿಲ್ಲ. ಬದುಕುವುದಕ್ಕಾಗಿ ಕೊಟ್ಟಿದ್ದಾನೆ. ಹೇಗೆ ಬದುಕಬೇಕೆಂಬುವುದು ಒಂದು ಕಲೆ ಎಂದರು.
ಡಾ. ಭೀಮಾಶಂಕರ ಬಿಲಗುಂದಿ, ಬಿಂದರನ ಶಂಕರಾನಂದ ಸ್ವಾಮೀಜಿ, ಸಿದ್ದೇಶ್ವರ ಶಾಸ್ತ್ರೀಗಳು, ಮಲ್ಲಕಾರ್ಜುನ ಸ್ವಾಮಿ ಟೆಂಗಳಿ, ಬಸವರಾಜ ಪುಣ್ಯಶೆಟ್ಟಿ, ಉಮೇಶ ಶೆಟ್ಟಿ, ಮಲ್ಲಿಕಾರ್ಜುನ ನಾಗಶೆಟ್ಟಿ, ಕಾಶಿನಾಥ ಚಿನಮಳ್ಳಿ, ಈರಣ್ಣ ದಸ್ಮಾ, ಕಲ್ಯಾಣಪ್ಪ ಮುತ್ತಾ, ಬಸವರಾಜ ಪ್ಯಾಟಿ, ಲಕ್ಷ್ಮೀನಾರಾಯಣ ಸಿಂಗ್, ಸಂಗಮೇಶ ಡಿವಟಗಿ, ನಾಗೇಂದ್ರಪ್ಪ ಪಾಟೀಲ್, ಬಸವರಾಜ ಹಿಂದೊಡ್ಡಿ ಇತರರು ಉಪಸ್ಥಿತರಿದ್ದರು.
ದತ್ತರಾಜ ಕಲಶೆಟ್ಟಿ, ವೀರಯ್ಯ ಸ್ವಾಮಿ, ಮೌನೇಶ ಪಂಚಾಳ ವಚನ ಸಂಗೀತ ನಡೆಸಿಕೊಟ್ಟರು. ಮಲ್ಲಿನಾಥ ದೇಶಮುಖ ಪ್ರಾರ್ಥನೆ ಗೀತೆ ಹಾಡಿದರು. ಶಿವರಾಜ ಅಂಡಗಿ ನಿರೂಪಿಸಿ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement