ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಾಲದ ಅರ್ಜಿಗೆ ಪರದಾಟ

Vishwanath S
Updated On : 14 Sept 2013, 12:20 pm

ಲಿಂಗಸ್ಗೂರು: ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಫಲಾನುಭವಿಗಳು ಸಾಲ ಸೌಲಭ್ಯಕ್ಕಾಗಿ ಅರ್ಜಿ ಪಡೆಯಲು ರಾಯಚೂರು ವಲಯ ಅಧಿಕಾರಿಗಳು ಬಾರದ ಕಾರಣ ಪರದಾಡುವಂತಾಗಿದೆ ಎಂದು ವಿವಿಧ ಗ್ರಾಮಸ್ಥರು ಶುಕ್ರವಾರ ತಹಸೀಲ್ದಾರರಿಗೆ ದೂರಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಫಲಾನುಭವಿಗಳು ಗಂಗಾ ಕಲ್ಯಾಣ, ನೇರಸಾಲ, ಹೈನುಗಾರಿಕೆ ಸೇರಿದಂತೆ ವಿವಿಧ ಯೋಜನೆಗಳಿಗಾಗಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಪಡೆಯಲು ಹಾಗೂ ಸಲ್ಲಿಸುವ ಉದ್ದೇಶದಿಂದ ನಿಗಮದ ರಾಯಚೂರು ವಲಯ ಅಧಿಕಾರಿಗಳಿಗಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಲು ಸೆ.16 ಕೊನೆಯ ದಿನವೆಂದು ಹೇಳಲಾಗುತ್ತಿದೆ.
ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಜನರು ಅರ್ಜಿ ಪಡೆಯಲು ಆಗಮಿಸುತ್ತಿದ್ದಾರೆ. ಆದರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಚೇರಿಗೆ ಬಾರದ ಕಾರಣ ಅರ್ಜಿ ಪಡೆಯದೆ ಬಂದ ದಾರಿಗೆ ಸುಂಕವಿಲ್ಲವೆಂದು ಹಿಂತಿರುಗುವಂತಾಗಿದೆ. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕೇಳಿದರೆ ನಮಗೆ ಸಂಬಂಧವಿಲ್ಲ. ಸಹಾಯಕ ಆಯುಕ್ತರಿಗೆ ಅಥವಾ ತಹಸೀಲ್ದಾರರ ಗಮನಕ್ಕೆ ತರುವಂತೆ ಉತ್ತರ ನೀಡುತ್ತಿದ್ದಾರೆ. ಕೂಡಲೇ ನಿಗಮದ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಹಾಗೂ ಅರ್ಜಿ ಪಡೆಯುವ ದಿನಾಂಕ ಮುಂದೂಡಬೇಕೆಂದು ಮೌನೇಶ ಸಂತೆಕೆಲ್ಲೂರ, ಮಾನಪ್ಪ ಪೂಜಾರ ಐದನಾಳ, ಬಸವರಾಜ ವೀರಾಪೂರ, ಚೌರಪ್ಪ ಚಿಕ್ಕಹೆಸರೂರ, ವೀರೇಶ ಬೆನಕನಾಳ, ರಾಮಣ್ಣ, ಅಮರೇಶ ಕಾಳಾಪೂರ, ನಾಗರಾಜ ಮಟ್ಟೂರ, ಹುಲಗಪ್ಪ ಈಚನಾಳ, ಶೇಠೆಪ್ಪ ಹಾಲಬಾವಿ ತಾಂಡಾ, ಸೋಮಣ್ಣ ಉಪ್ಪೇರಿ ಇನ್ನಿತರರು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement