ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ದಿ.ಚಂದ್ರಶೇಖರಪ್ಪಗೌಡ ಮಹಾನ್ ಕಲಾಭಿಮಾನಿ: ಜೋಶಿ

Vishwanath S
Updated On : 15 Sept 2013, 11:57 am

ಕ.ಪ್ರ. ವಾರ್ತೆ  ಸಿಂಧನೂರು  ಸೆ.14
ತಾಲೂಕಿನ ಗೊರೇಬಾಳ ಗ್ರಾಮದ ದಿವಂಗತ ನೆಟಕಲ್ ಚಂದ್ರಶೇಖರಪ್ಪಗೌಡರು ನಮ್ಮನ್ನಗಲಿದ್ದರೂ ಅವರಲ್ಲಿದ್ದ ಕಲಾಭಿಮಾನ, ನಾಟಕ, ಸಂಗೀತ ಕಲಾವಿದರಿಗೆ ಗೌರವಿಸಿ ಪ್ರೋತ್ಸಾಹ ನೀಡುತ್ತಿದ್ದ ಸಹಕಾರ ಮನೋಭಾವ ಮರೆಯಲಾಗದು ರಂಗಭೂಮಿಯ ಹಿರಿಯ ಹವ್ಯಾಸಿ ಕಲಾವಿದ ವೆಂಕಣ್ಣಾಚಾರ್ ಜೋಶಿ ಸ್ಮರಿಸಿದರು.
 ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಎಲ್‌ಬಿಕೆ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ನೆಟಕಲ್ ಚಂದ್ರಶೇಖರಪ್ಪಗೌಡರು ಗೊರೇಬಾಳ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಮಾಜ ಹಾಗೂ ರಂಗಭೂಮಿ ವಿಷಯ ಕುರಿತು ಉಪನ್ಯಾಸ ನೀಡಿದರು.
ಕಲೆ ಹಾಗೂ ಕಲಾವಿದರ ಬಗ್ಗೆ ಅಪಾರ ಗೌರವ, ಅಭಿಮಾನವನ್ನು ಹೊಂದಿದ್ದ ಅವರು ನೇರ ನುಡಿಯ ವ್ಯಕ್ತಿಯಾಗಿದ್ದರು ಎಂದ ಅವರು, ಕಂದಗಲ್ ಹನುಮಂತರಾಯ ವಿರಚಿತ ಪೌರಾಣಿಕ “ÁÚOÚ¡ÁÛ~Ã’ ನಾಟಕದಲ್ಲಿಯ ಭೀಮನ ಪಾತ್ರದ ಕೆಲವು ಸನ್ನಿವೇಶಗಳನ್ನು ಅಭಿನಯದ ಮೂಲಕ ನೆರೆದ ಜನಸಮೂಹದ ಗಮನ ಸೆಳೆದರು.
ಕಲೆ ಮೇಲೆ ಅತೀವ ಅಭಿಮಾನವಿತ್ತು: ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ದೇವೇಂದ್ರಗೌಡರು ಬಸವಣ್ಣನವರ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ, ದಿ. ನೆಟಕಲ್ ಚಂದ್ರಶೇಖರಪ್ಪಗೌಡರು ಸಂಗೀತ, ನಾಟಕ ಕ್ಷೇತ್ರಗಳ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರು.
  ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರೆಂದು ಹೇಳಿದರು.
ಕಸಾಪ ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ ಮಾತನಾಡಿ, ದತ್ತಿ ದಾನಿಗಳ ಪರಿಚಯ ಹಾಗೂ ದತ್ತಿ ಉಪನ್ಯಾಸದ ಮಹತ್ವವನ್ನು ತಿಳಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಮೆಹ್ತಾ ಮಾತನಾಡಿ, ಸಂಘಟನೆಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.
ಬಡವರ ಮೇಲೆ ಕಾಳಜಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಕ್ತಾ ಪತ್ತಿನ ಸಹಕಾರಿ ಸೌಹಾರ್ದದ ಅಧ್ಯಕ್ಷ ಪಿ.ವೀರಭದ್ರಪ್ಪ ಕುರಕುಂದಿ ಮಾತನಾಡಿ, ರಂಗಭೂಮಿಯ ಹಾಗೂ ಸಂಗೀತದ ಬಗ್ಗೆ ಅಭಿಮಾನ, ಆಸಕ್ತಿ ಹೊಂದಿದ್ದ ಚಂದ್ರಶೇಖರಪ್ಪಗೌಡರು ತಮ್ಮ ಹೆಚ್ಚುವರಿ ಭೂಮಿಯನ್ನು ಬಡವರಿಗೆ ಹಂಚಿದ್ದರು.  ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ದತ್ತಿ ದಾನಿಗಳಾದ ಗಿರಿಜಾ ಮಹಿಳಾ ಪಪೂ ಕಾಲೇಜು ಉಪನ್ಯಾಸಕ ಜಿ.ಬಿ. ಹೇಮವಾಡಗಿ, ಎಲ್‌ಬಿಕೆ ಕಾಲೇಜಿನ ಆಡಳಿತಾಧಿಕಾರಿ ಪಂಪಣ್ಣ ಹಳ್ಳಿ, ಉಪನ್ಯಾಸಕ, ಹಿರಿಯ ಸಾಹಿತಿ ಎಚ್.ಜಿ. ಹಂಪಣ್ಣ, ಶ್ರೀಕೃಷ್ಣದೇವರಾಯ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ವೈ.ನರೇಂದ್ರನಾಥ, ನಾರಾಯಣಾಚಾರ್ ಜೋಶಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬೀರಪ್ಪ ಶಂಭೋಜಿ, ಅಮರೇಶ ಗುರಿಕಾರ್, ಸರಸ್ವತಿ ಪಾಟೀಲ್, ಶಕುಂತಲಾದೇವಿ ಭಾಗವಹಿಸಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಲಯನ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಮೆಹ್ತಾ, ಜಿಲ್ಲಾ ಮಟ್ಟದ ಉತ್ತಮ ವರದಿಗಾರ ಪ್ರಶಸ್ತಿ ಪಡೆದಿರುವ ಪತ್ರಕರ್ತ ಅಮರೇಶ ಅಲಬನೂರು, ಲಯನ್ಸ್ ಕ್ಲಬ್ ವತಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಶ್ರೀಶೈಲ್ ಕೌದಿ ಅವರನ್ನು ಸನ್ಮಾನಿಸಲಾಯಿತು. ಕುಮಾರಿ ಕಳಕಮ್ಮ ಪ್ರಾರ್ಥಿಸಿದರು.
 ಪ್ರಾಚಾರ್ಯ ಪರಶುರಾಮ ಮಲ್ಲಾಪೂರ ಸ್ವಾಗತಿಸಿದರು. ಶಿವಲೀಲಾ ಹಿರೇಮಠ ವಂದಿಸಿದರು. ಲಕ್ಷ್ಮಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement