ಗಾಯಗೊಂಡಿದ್ದ ಮಹಿಳೆ ಸಾವು
ರಾಯಚೂರು ತಾಲೂಕಿನ ಜುಲಮಗೇರಾ ಗ್ರಾಮದಲ್ಲಿ ಮನೆ ಗೋಡೆ ಕುಸಿತದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ. ಮೃತಳನ್ನು ತಾಯಮ್ಮ(55) ಎಂದು ಗುರುತಿಸಲಾಗಿದೆ. ಸೆ.10ರಂದು ಸುರಿದ ಭಾರಿ ಮಳೆಗೆ ಮನೆಯ ಗೋಡೆ ಕುಸಿದು ತೀವ್ರ ಗಾಯಗೊಂಡಿದ್ದಳು. ಗಾಯಾಳುವನ್ನು ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.