ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ'

Lingaraj Badiger
Updated On : 16 Sept 2013, 11:03 am

ಸಿಂಧನೂರು: ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಸಮಸ್ಯೆ ನಿವಾರಿಸುವ ದೃಷ್ಟಿಯಿಂದ ಎಮ್‌ಬಿಬಿಎಸ್ ಮುಗಿಸಿದವರಿಗೆ ಒಂದು ವರ್ಷಗಳ ಕಾಲ ಗ್ರಾಮೀಣ ಸೇವೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಹೇಳಿದರು. ಗಾಂಧಿನಗರ ಗ್ರಾಮದಲ್ಲಿ ನೂತನವಾಗಿ 99.75 ಲಕ್ಷ ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ದುಶ್ಚಟದಿಂದ ದೂರಾಗಿ: ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಸಮಸ್ಯೆ ಬಾಧಿಸುತ್ತಿದೆ. ಆಸ್ಪತ್ರೆ ನಿರ್ಮಿಸಿದರೂ ವೈದ್ಯರು ಇಲ್ಲದಾಗಿದ್ದಾರೆ. ಹೀಗಾಗಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಗ್ರಾಮೀಣ ಸೇವೆ ಕಡ್ಡಾಯಗೊಳಿಸುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ. ಯುವ ಸಮೂಹ ದುಶ್ಚಟದಿಂದ ದೂರಾಗಬೇಕು. ಗುಟ್ಕಾ ಮುಕ್ತಗೊಳಿಸಲೆಂದೇ ನಿಷೇಧ ಮಾಡಲಾಗಿದೆ. ಸರ್ಕಾರ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪ್ರತಿಯೊಬ್ಬರು ಪೌಷ್ಟ್ಠಿಕ ಆಹಾರ ಸೇವಿಸುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದರು.
ಯೋಜನೆಗಳ ಸದುಪಯೋಗವಾಗಲಿ: ಮಹಿಳೆಯರಲ್ಲಿ ಕಬ್ಬಿಣದ ಅಂಶದ ಕೊರತೆ ನೀಗಿಸಲೆಂದೇ ಮಾತ್ರೆಗಳನ್ನು ನೀಡಲಾಗುತ್ತಿದೆ. ರಾಯಚೂರಿನ ಒಪೆಕ್ ಆಸ್ಪತ್ರೆ ಆರಂಭಿಸಲಾಗಿದೆ ಎಂದರು.ನಗರಸಭೆ ಅಧ್ಯಕ್ಷ ಜಾಫರ ಜಾಗೀರದಾರ, ಮುಖಂಡ ಲಿಂಗರಾಜ ಪಾಟೀಲ, ತಾಪಂ ಅಧ್ಯಕ್ಷೆ ಬಸಮ್ಮ ಕೊಟ್ರಪ್ಪ, ಎಪಿಎಂಸಿ ಅಧ್ಯಕ್ಷ ಕರಿಯಪ್ಪ, ಗ್ರಾಪಂ ಅಧ್ಯಕ್ಷ ಗೋಪಿನೀಡು ಕೃಷ್ಣ, ಉಪಾಧ್ಯಕ್ಷ ರಾಮಣ್ಣ, ತಾಪಂ ಸದಸ್ಯೆ ಸುವರ್ಣಮ್ಮ, ಜಾಲಿಹಾಳ ಗ್ರಾಪಂ ಅಧ್ಯಕ್ಷ ವೀರೇಶಪ್ಪ ಸೂಗೂರು, ಸಹಾಯಕ ಆಯುಕ್ತ ಟಿ. ಯೋಗೀಶ, ಕೆಪಿಸಿಸಿ ಸದಸ್ಯರಾದ ಎನ್. ಶಿವನಾಗಪ್ಪ, ಆರ್. ತಿಮಮ್ಮಯ್ಯ ನಾಯಕ, ತಾಲೂಕ ವೈದ್ಯಾಧಿಕಾರಿ ಡಾ. ಹಸನ್ ಹುಸೇನ್, ತಾಪಂ ಸದಸ್ಯ ಇ.ಸುಬ್ಬಾರಾವ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement