ಜೀವನ ಶೈಲಿ ಬದಲು; ಆರೋಗ್ಯ ಸುಧಾರಣೆ
ರಾಯಚೂರು: ಆಧುನಿಕ ಜಗತ್ತಿನ ತರಾತುರಿಯ ಜೀವನಶೈಲಿಯಿಂದ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತಿದ್ದು, ಜೀವನ ಶೈಲಿಯಲ್ಲಿ ಕೆಲ ಮಾರ್ಪಾಟು ಮಾಡಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಪಡೆಯುವಂತೆ ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಸಲಹೆ ನೀಡಿದರು.
ನಗರದಲ್ಲಿ ಭಾನುವಾರ ಇನ್ನರ್ ವೀಲ್ ಕ್ಲಬ್ ಮತ್ತು ಬೆಂಗಳೂರಿನ ಅಪೋಲೋ ಸಂಸ್ಥೆಯ ವತಿಯಿಂದ ಬೂಬ್ ಭವನದಲ್ಲಿ ಆಯೋಜಿಸಿದ್ದ ಆರೋಗ್ಯದ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಜನರ ಆರೋಗ್ಯ ಕಾಪಾಡುವ ಕಾಳಜಿಯೊಂದಿಗೆ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಶಿಬಿರದಲ್ಲಿ ಅಪೋಲೋ ಸಂಸ್ಥೆಯ ಡಾ. ಗಿರೀಶ್ ನವಸುಂಧಿ, ಡಾ. ಅಭಿಲಾಷ್ ಬನ್ಸಲ್, ಡಾ. ಸುನೀತಾ ಮತ್ತಿತರರು ರೋಗಿಗಳ ಆರೋಗ್ಯದ ಉಚಿತ ತಪಾಸಣೆ ನಡೆಸಿದರು. ಶಿಬಿರದಲ್ಲಿ ಇನ್ನರ್ ವೀಲ್ ಕ್ಲಬ್ನ ಅಧ್ಯಕ್ಷೆ ಸುಷ್ಮಾ ಪತಂಗೆ, ಅರ್ಚನಾ ಪಾಧ್ಯೆ, ಸರ್ವಮಂಗಳಾ ಚೆಟ್ಟಿ, ಲಕ್ಷ್ಮಿಕಾಂತ ಮ್ಮ ಅಂಬಟಿ, ಅನಿತಾ ವೆಂಕಟೇಶ್ ಸೇರಿ ಅನೇಕರಿದ್ದರು. ಶಿಬಿರದಲ್ಲಿ 200ಕ್ಕೂ ಹೆಚ್ಚಿನ ಜನರ ಆರೋಗ್ಯದ ತಪಾಸಣೆ ನಡೆಸಲಾಯಿತು.