ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪಿಯು ಕಾಲೇಜು ಮಂಜೂರು: ಭರವಸೆ

Lingaraj Badiger
Updated On : 17 Sept 2013, 10:59 am

ಸಿಂಧನೂರು: ದೇವರ ಪೂಜೆಯಿಂದ ಮಾನಸಿಕ ನೆಮ್ಮದಿ ದೊರೆಯಬಹುದು. ಆದರೆ ವ್ಯಕ್ತಿಯಲ್ಲಿ ಆಂತರಿಕ ಮತ್ತು ಸಾಮಾಜಿಕ ಬದಲಾವಣೆ ಉಂಟು ಮಾಡಿ ಅಭಿವೃದ್ಧಿಯತ್ತ ಕೊಂಡೊಯ್ಯುವ ಶಾಲೆಗಳೇ ನಿಜವಾದ ದೇವಾಲಯ ಎಂದು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಅಭಿಪ್ರಾಯಪಟ್ಟರು.
ತಾಲೂಕಿನ ಬಳಗಾನೂರು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಬಹಿರಂಗ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಶೈಕ್ಷಣಿಕ ಅಭಿವೃದ್ಧಿಗೆ ಕ್ಷೀರಭಾಗ್ಯದಂತಹ ವಿನೂತನ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದರು.
26 ಲಕ್ಷ ಮಂಜೂರು: ಗ್ರಾಮದ ಸರ್ಕಾರಿ ಪ್ರೌಢಶಾಲೆ ಕೊಠಡಿಗಳ ನಿರ್ಮಾಣಕ್ಕಾಗಿ 26 ಲಕ್ಷ ಮಂಜೂರಾಗಿದೆ. ತುರ್ವಿಹಾಳ ಗ್ರಾಮಕ್ಕೆ ಪದವಿಪೂರ್ವ ಕಾಲೇಜ್ ಮಂಜೂರಾಗಿದ್ದು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಬಳಗಾನೂರು ಗ್ರಾಮಕ್ಕೂ ಪಿಯು ಕಾಲೇಜ್ ಮಂಜೂರು ಮಾಡಿಸಲಾಗುವುದು ಎಂದು ಭರವಸೆ ನೀಡಿದರು. ಎಪಿಎಂಸಿ ಮಾಜಿ ನಿರ್ದೇಶಕ ಡಾ. ದಿವಟರ್, ಗ್ರಾಪಂ ಮಾಜಿ ಅಧ್ಯಕ್ಷ ಬಿ.ತಿಕ್ಕಯ್ಯ, ವಿಎಸ್‌ಎಸ್‌ಎನ್ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮಾತನಾಡಿದರು. ತಾಪಂ ಸದಸ್ಯೆ ಬಾಲಮ್ಮ ನಾಗಬುಸ್ಸಪ್ಪ, ಮಾಜಿ ಸದಸ್ಯ ಬಸನಗೌಡ ಮುದಿಗೌಡರ್, ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಗುತ್ತೇದಾರ್, ಉಪಾಧ್ಯಕ್ಷ ಎಚ್. ಮಹಾಬಳೇಶ್ವರ, ಮುಖಂಡರಾದ ಯಂಕಪ್ಪ ನಾಯಕ, ಶೇಖರಪ್ಪ ಮೇಟಿ, ಎಂ.ಡಿ. ಆಲಂಸಾಬ, ವಿರುಪಣ್ಣ ಗುತ್ತೇದಾರ್, ಎಸ್‌ಡಿಎಂಸಿ ಅಧ್ಯಕ್ಷ ರಾಜಶೇಖರ ನಾಗಲೀಕರ, ಯಂಕನಗೌಡ ಗದ್ದಿ, ಅಜಯ ನಾಡಗೌಡ, ಶಂಕರರಾವ್‌ಕುಲಕರ್ಣಿ, ಮೃತ್ಯುಂಜಯಸ್ವಾಮಿ ಪಿಡಿಒ ನಾಗೇಶ, ಎಎಸ್‌ಐ ಪಾಂಡುಸಿಂಗ್ ಮತ್ತಿತರರು ಇದ್ದರು.
ಗ್ರಾಮದ ಬಸವೇಶ್ವರ ನಗರ ಹಾಗೂ ನಾಯಕ ವಾಡಿಯಲ್ಲಿ ಸಿ.ಸಿ. ರಸ್ತೆ ಕಾಮಗಾರಿ, ಎಸ್‌ಸಿ ಸಮುದಾಯ ಭವನ ಕಾಮಗಾರಿ, ಸರ್ಕಾರಿ ಪ್ರೌಢಶಾಲೆಯ ಕೊಠಡಿಗಳ ನಿರ್ಮಾಣ ಕಾಮಗಾರಿ ಹಾಗೂ ಮಾರುತಿ ದೇವಸ್ಥಾನದ ಸಮುದಾಯ ಭವನ ಕಾಮಗಾರಿಗೆ ಇದೇ ವೇಳೆ ಶಾಸಕರು ಚಾಲನೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement