ಮುಖ್ಯರಸ್ತೆ ತೆಗ್ಗು ಮುಚ್ಚಿ ಮಾನವೀಯತೆ ಮೆರೆದರು
ಸಿಂಧನೂರು: ನಗರದ ರಾಯಚೂರು- ಗಂಗಾವತಿ ರಸ್ತೆಯ ಮುಖ್ಯರಸ್ತೆಯಲ್ಲಿ ದೊಡ್ಡದಾದ ತೆಗ್ಗು ಬಿದ್ದು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿದ್ದನ್ನು ಗಮನಿಸಿದ ನಾಗರಿಕರು ತಾವೇ ತಗ್ಗು ಮುಚ್ಚುವ ಮೂಲಕ ಮಾನವೀಯತೆ ಮೆರೆದರು.
ಕಳೆದ ಐದಾರು ದಿನಗಳಿಂದ ಏಳೆಂಟು ಜನ ಸೈಕಲ್ ಮೋಟಾರ್ ತೆಗೆದುಕೊಂಡು ಹೋಗುವಾಗ ಬಿದ್ದುದ್ದನ್ನು ಗಮನಿಸಿದ ವಿಶ್ವಾಸ, ಚಂದ್ರಶೇಖರ, ಮಹಿಮೂದ್ ಮೇಸ್ತ್ರಿ, ಸದ್ದಾಂ, ರಫೀಕ್ ತೆಗ್ಗುವ ಮುಚ್ಚುವ ಕಾರ್ಯಕ್ಕೆ ಮುಂದಾದರು. ವಾರಗಟ್ಟಲೇ ಮುಖ್ಯರಸ್ತೆಯಲ್ಲೇ ದೊಡ್ಡ ತಗ್ಗು ಬಿದ್ದರೂ ಮುಚ್ಚುವ ಮಾನವೀಯತೆ ತೋರದ ಲೋಕೋಪಯೋಗಿ ಇಲಾಖೆ ಕರ್ತವ್ಯ ಲೋಪದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.