ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸ್ವಚ್ಛತೆ, ಬೀದಿ ದೀಪಗಳ ಅಳವಡಿಕೆಗೆ ಸೂಚನೆ

Lingaraj Badiger
Updated On : 17 Sept 2013, 11:10 am

ಮುದಗಲ್: ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಆಚರಣೆ ಮಾಡಬೇಕೆಂದು ಪಪಂ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಪಂ ನೂತನ ಅಧ್ಯಕ್ಷ ರಜ್ಜಬಲಿ ಹಳೆಪೇಟೆ ಅಧ್ಯಕ್ಷತೆಯಲ್ಲಿ ಪ್ರಥಮ ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರಾದ ಶಿವರಾಜ ತಳವಾರ, ಮಾಸೂಮ ಷರೀಫ್ ತಮಗೆ ನೀಡಿದ ಸಭೆ ನೋಟಿಸ್‌ನಲ್ಲಿ ಅಧ್ಯಕ್ಷರ ಅಪ್ಪಣೆ ಮೇರೆಗೆ ಎಂದು ಬರೆಯಲಾಗಿದೆ ಆದರೆ ಅಧ್ಯಕ್ಷರ ರುಜು ಇಲ್ಲ ಎಂದರು.
ಮಧ್ಯಸ್ಥಿಕೆ ವಹಿಸಿದ ಆಡಳಿತ ಪಕ್ಷದ ಸದಸ್ಯ ಈರಣ್ಣ, ಅಧ್ಯಕ್ಷರು ಹೇಳಿದ ಮೇಲೆನೇ ಮುಖ್ಯಾಧಿಕಾರಿಗಳು ಸಭೆ ಕರೆದಿದ್ದಾರೆಂದು ಸಮಜಾಯಿಷಿ ನೀಡುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು “ÈÚßßSÛÀ©OÛÂVÚ×Ú«Úß­ ಕೇಳುತ್ತಿದ್ದೇವೆ ಹೊರತು ¬ÈÚß½«Ú­ÄÇ’ ಎಂದು ವಾಗ್ವಾದಕ್ಕಿಳಿದರು.
ಆಯ- ವ್ಯಯದ ವಿವರ ಕೊಡಿ: ಮುಖ್ಯಾಧಿಕಾರಿ ಎಂ.ವಿಜಯಲಕ್ಷ್ಮಿ ಮಾತನಾಡಿ, ಸರ್ಕಾರದಿಂದ ಬಂದಂತ ಅನುದಾನ ಯಾವ ಯಾವ ಯೋಜನೆಯಲ್ಲಿ ಎಷ್ಟೆಷ್ಟು ಉಳಿದಿದೆ ಎನ್ನುವ ವರದಿ ಮಂಡಿಸಿದರು. ಸದಸ್ಯ ಈರಣ್ಣ ವಡ್ಡರ ಪಪಂ ಅಕೌಂಟ್ ನಂಬರ್ 1 ಮತ್ತು ಜಮಾ ಖರ್ಚಿನ ವಿವರಣೆ ನೀಡಬೇಕೆಂದು ಮುಖ್ಯಾಧಿಕಾರಿಗೆ ತಿಳಿಸಿದರು. ಸದಸ್ಯ ಖಾಜಾಪಾಷಾ ಪಟ್ಟಣದಲ್ಲಿ ಬೀದಿ ದೀಪಗಳು ಇಲ್ಲ, ಚರಂಡಿಗಳ ಸ್ವಚ್ಛತೆ ಇಲ್ಲ, ಅವುಗಳನ್ನು ಮೊದಲು ಸ್ವಚ್ಛ ಮಾಡಿಸಿ, ಸದಸ್ಯರಿಗೆ ಜನರು ಛೀಮಾರಿ ಹಾಕುವಂತೆ ಮಾಡಬೇಡಿ ಎಂದರು.
180 ಕೋಟಿ ಬಿಡುಗಡೆಯಾಗಬೇಕು: ಪಟ್ಟಣ ಪಂಚಾಯಿತಿಗೆ ವಾಜಪೇಯಿ ವಸತಿ ಯೋಜನೆಯಡಿ 248, ಅಶ್ರಯ ಯೋಜನೆಯಡಿ 75 ಸೇರಿ ಒಟ್ಟು 323 ಮನೆಗಳಿಗೆ ಹಣ ಮಂಜೂರಾಗಿದ್ದು ಅದರಲ್ಲಿ 14 ಮನೆಗಳು ಪೂರ್ಣಗೊಂಡಿವೆ. ಲಿಂಟಲ್ ಲೇವಲ್‌ಗೆ 42, ತಳಪಾಯದಲ್ಲಿ 92, ಇನ್ನು ಆರಂಭವಾಗದ ಸ್ಥಿತಿಯಲ್ಲಿ 179 ಮನೆಗಳಿವೆ.
 ಇವುಗಳಿಗಾಗಿ 60.86 ಲಕ್ಷ ಅನುದಾನ ಬಿಡುಗಡೆಯಾಗಿದ್ದು, 56 ಲಕ್ಷ ಖರ್ಚಾಗಿದೆ. ಇನ್ನೂ 180.75 ಕೋಟಿ ಬಿಡುಗಡೆಯಾಗಬೇಕಾಗಿದೆ.
ಎಸ್‌ಎಫ್‌ಸಿ ಯೋಜನೆಯಡಿ 2012- 13ನೇ ಸಾಲಿನಲ್ಲಿ 106 ಕೋಟಿ, 2013- 14ನೇ ಸಾಲಿನಲ್ಲಿ 223.69 ಕೋಟಿ ಸೇರಿ 329.69 ಕೋಟಿ ಉಳಿದಿದೆ.
 ಬಿಆರ್‌ಜಿಎಫ್‌ನಲ್ಲಿ 136.16 ಕೋಟಿ, 13ನೇ ಹಣಕಾಸು ಯೋಜನೆಯಲ್ಲಿ 174.48 ಅನುದಾನ ಉಳಿದಿದ್ದು ಯೋಜನೆಗಳ ಕ್ರಿಯಾಯೋಜನೆ ಮಾಡಬೇಕಾಗಿದೆ ಎಂದು ತಿಳಿಸಿದರು. ಉಪಾಧ್ಯಕ್ಷ ಹಂಪಮ್ಮ, ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement