ವಿಶ್ವಕರ್ಮ ಭಗವಾನ್ ಭಾವಚಿತ್ರದ ಮೆರವಣಿಗೆ
ದೇವದುರ್ಗ: ಪಟ್ಟಣದಲ್ಲಿ ವಿಶ್ವಕರ್ಮ ಭಗವಾನ್ ಅವರ ಭಾವಚಿತ್ರದ ಮೆರವಣಿಗೆ ಮಂಗಳವಾರ ಆಯೋಜಿಸಲಾಗಿತ್ತು. ಶಾಸಕ ಎ.ವೆಂಕಟೇಶ ನಾಯಕ ಮೆರವಣಿಗೆಗೆ ಚಾಲನೆ ನೀಡಿದರು. ಆನೆಗುಂದಿ ಸಂಸ್ಥಾನ ಸರಸ್ವತಿ ಮೂಲ ಪೀಠ ದೇವದುರ್ಗದ ಪೀಠಾಧೀಶರಾದ ಅಯ್ಯಪ್ಪಯ್ಯ ಸ್ವಾಮೀಜಿ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು. ಮಲ್ಲಪ್ಪ ವಿಶ್ವಕರ್ಮ, ಚಿತ್ರಶೇಖರ ಮದರಕಲ್, ಮೌನೇಶ ಪತ್ತಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಬಡಿಗೇರ್, ಯುವ ಜಿಲ್ಲಾಧ್ಯಕ್ಷ ಗುರುರಾಜ್ ದೇವದುರ್ಗ, ರಮೇಶ ಕೆ., ರಾಮು ಗಾಣಧಾಳ ಸೇರಿ ವಿಶ್ವಕರ್ಮ ಸಮಾಜದವರು ಪಾಲ್ಗೊಂಡಿದ್ದರು.