ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಚರಂಡಿ ಸ್ವಚ್ಛತೆ, ರಕ್ಷಣಾ ಗೋಡೆ ನಿರ್ಮಾಣಕ್ಕೆ ಒತ್ತಾಯ

Lingaraj Badiger
Updated On : 19 Sept 2013, 11:11 am

ಕನ್ನಡಪ್ರಭ ವಾರ್ತೆ, ರಾಯಚೂರು, ಸೆ.18
ನಗರದ ಜಲಾಲ್‌ನಗರ, ಅರಬ್ ಮೊಹಲ್ಲಾ, ರಾಂಪುರ ಮತ್ತಿತರೆ ಮಳೆಯಿಂದ ತೊಂದರೆಗೊಳಗಾದ ಪ್ರದೇಶಗಳಿಗೆ ನಗರಸಭೆ ಉಪಾಧ್ಯಕ್ಷೆ ಪದ್ಮಾವತಿ ಜಿಂದಪ್ಪ ಮತ್ತು ಸದಸ್ಯರು ಭೇಟಿ ನೀಡಿದರು.
ನಗರದ ಜಲಾಲ್ ನಗರದ ನಿವಾಸಿಗಳು ನಗರಸಭೆಯ ಉಪಾಧ್ಯಕ್ಷೆ ಪದ್ಮಾವತಿ ಜಿಂದಪ್ಪ ಮತ್ತು ಸದಸ್ಯರಿಗೆ ಮಳೆಯಾದ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ದೂರಿ, ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡುವುದು, ಮಳೆ ನೀರಿನಿಂದ ಗುಡಿಸಲುಗಳನ್ನು ರಕ್ಷಿಸಲು ರಕ್ಷಣಾ ಗೋಡೆ ನಿರ್ಮಿಸುವಂತೆ ಒತ್ತಾಯಿಸಿದರು.
ತುರ್ತು ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿ: ಅದೇ ರೀತಿ ಅರಬ್ ಮೊಹಲ್ಲಾ, ರಾಂಪುರ ಪ್ರದೇಶದ ನಿವಾಸಿಗಳೂ ಸಹ ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶದ ನಿವಾಸಿಗಳಿಗೆ ಆಗುತ್ತಿರುವ ತೊಂದರೆಯನ್ನು ವಿವರಿಸಿದರು. ಈ ಬಗ್ಗೆ ನಗರಸಭೆ ಉಪಾಧ್ಯಕ್ಷೆ ಪದ್ಮಾವತಿ ಜಿಂದಪ್ಪ ಮತ್ತು ಸದಸ್ಯರು, ನಗರಸಭೆ ಅಧ್ಯಕ್ಷೆ ಮತ್ತು ಪೌರಾಯುಕ್ತರನ್ನು ನಂತರದಲ್ಲಿ ಭೇಟಿ ಮಾಡಿ, ನಗರಸಭೆಯಿಂದ ಮಳೆಯ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಎದುರಿಸಲು ಐದು ಜೆಸಿಬಿ ಯಂತ್ರಗಳನ್ನು ಸನ್ನದ್ಧವಾಗಿರಿಸಲು ಒತ್ತಾಯಿಸಿದ್ದಾರೆ.
ಚರಂಡಿಯಲ್ಲಿನ ಹೂಳೆತ್ತಲು ಆದ್ಯತೆ ನೀಡಬೇಕು. ಮಳೆ ನೀರು ಗುಡಿಸಲುಗಳಿಗೆ ನುಗ್ಗುವುದನ್ನು ತಡೆಯಲು ನಗರಸಭೆಯು ಜೆಸಿಬಿ ಯಂತ್ರಗಳನ್ನು ಸಿದ್ಧವಾಗಿರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ನಗರಸಭೆಯ ಆಡಳಿತವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಜಿಂದಪ್ಪ, ನಗರಸಭೆಯ ಹಿರಿಯ ಸದಸ್ಯ ಜಯಣ್ಣ, ಆಂಜನೇಯ್ಯ ಯಕ್ಲಾಸಪುರ, ದೊಡ್ಡಮಲ್ಲೇಶ್, ಜೇಗರಕಲ್ ನರಸಪ್ಪ, ನರಸಪ್ಪ ಯಕ್ಲಾಸಪುರ, ಮಹಾಲಿಂಗ, ಈರಪ್ಪಗೌಡ, ವೀರೇಶ್, ಆದಿಬಾಬು, ನೂರಪಾಷಾ, ಪೆಪ್ಸಿ ಗೋವಿಂದ, ಮಕ್ಬೂಲ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement