ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ದಲಿತರ ಒಕ್ಕಲೆಬ್ಬಿಸುವ ಯತ್ನ ಕೈಬಿಡಿ'

Lingaraj Badiger
Updated On : 19 Sept 2013, 11:04 am

ಸಿಂಧನೂರು: ತಾಲೂಕಿನ ಕುನ್ನಟಗಿ ಹೋಬಳಿ ವ್ಯಾಪ್ತಿಯ ಮಂಗನಾಳ(ಡಿ) ಸೀಮಾದ ಸ.ನಂ. 41,42ರ ಫಾರಂ ನಂ.10ನ್ನು ರದ್ದುಪಡಿಸುವ ಮೂಲಕ ಒಕ್ಕಲೆಬ್ಬಿಸುವುದನ್ನು ತಡೆಯುವಂತೆ ಒತ್ತಾಯಿಸಿ ದಲಿತ ಸಮುದಾಯದ ಸಾಗುವಳಿದಾರರು ತಹಸೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನೂರಾರು ಜನರು ಪ್ರವಾಸಿ ಮಂದಿರದಿಂದ ತಹಸೀಲ್ದಾರ್ ಕಚೇರಿಗೆ ಆಗಮಿಸಿ 1991ರಲ್ಲಿ ಜಿಲ್ಲಾಧಿಕಾರಿಗಳ ಸಲಹೆ ಮೇರೆಗೆ ಮತ್ತು 2002ರಲ್ಲಿ ತಹಸೀಲ್ದಾರ್ ಸಮಕ್ಷಮದಲ್ಲಿ ನಡೆದ ಕರಾರು ಮೇರೆಗೆ ಸಾಗುವಳಿ ಮಾಡುತ್ತಾ ಬಂದಿದ್ದೇವೆ. ಆದರೆ ಬಸಾಪುರ ಈ.ಜೆ. ಗ್ರಾಮದ ಪಂಪನಗೌಡ ಅವರಿಂದ ಸರ್ವೆ ಅಧಿಕಾರಿಗಳಾದ ಶಾಂತಕುಮಾರ, ಎಸ್.ಸಿದ್ದರಾಮಯ್ಯ, ಎನ್.ನರಸಿಂಹಮೂರ್ತಿ ಅವರು ಖರೀದಿದಾರರಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ. ಜೂನ್ ತಿಂಗಳಲ್ಲಿ 10 ದಿನಗಳ ಕಾಲ ನಡೆಸಿದ ಧರಣಿ ಸ್ಥಳಕ್ಕೆ ತಹಸೀಲ್ದಾರರು ಆಗಮಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. 3 ತಿಂಗಳು ಗತಿಸಿದರೂ ಅನುಷ್ಠಾನಕ್ಕೆ ಬಂದಿಲ್ಲ ಎಂದು ಸಾಗುವಳಿದಾರರು ವಿವರಿಸಿದರು.
ರಾಜಕೀಯ ಪ್ರಭಾವ ಬಳಸಿಕೊಂಡು ದಲಿತರಿಗೆ ನೀಡಿದ ಭೂಮಿಯನ್ನು ವಾಪಸ್ ಕಿತ್ತುಕೊಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಲಿಂಗಸ್ಗೂರು ಸಹಾಯಕ ಆಯುಕ್ತರು ತಜ್ಞರಿಂದ ಸೂಕ್ತ ಮಾಹಿತಿ ಪಡೆದು ಜಿಲ್ಲಾಧಿಕಾರಿಗೆ ಕಳುಹಿಸಿದ್ದು ತಾವು ಶೀಘ್ರದಲ್ಲಿ ಭೂಮಿ ಪಂಚನಾಮೆ ಮಾಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಮರಿಯಮ್ಮ ಹುಲಗಪ್ಪ, ಭಾಗಮ್ಮ ಭಾಗಪ್ಪ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement