ಭಾರಿ ಮಳೆ; ಜನಜೀವನ ಅಸ್ತವ್ಯಸ್ತ
ರಾಯಚೂರು: ನಗರ ಸೇರಿದಂತೆ ಜಿಲ್ಲಾದ್ಯಂತ ಮಂಗಳವಾರ ರಾತ್ರಿಯಿಂದೀಚೆಗೆ ಧಾರಾಕಾರ ಮಳೆಯಾಗಿದ್ದು, ಮಾನವಿ ತಾಲೂಕಿನ ಸಿರವಾರದಲ್ಲಿ 54 ಮಿಮೀ ನಷ್ಟು ಸುರಿದಿದೆ.
ನಗರದಲ್ಲಿ ಮಂಗಳವಾರ ತಡರಾತ್ರಿಯಿಂದ ಬುಧವಾರ ಬೆಳಗ್ಗೆವರೆಗೆ ಧಾರಾಕಾರ ಮಳೆ ಸುರಿಯಿತು. ಇದರಿಂದಾಗಿ ನಗರದಲ್ಲಿ ವಿದ್ಯುತ್ ವ್ಯತ್ಯಯವಾಯಿತು. ರಸ್ತೆಗೆ ಚರಂಡಿ ನೀರು ನುಗ್ಗಿದ್ದರಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಯಿತು. ನಗರದಲ್ಲಿ ಬುಧವಾರ ಬೆಳಗ್ಗೆವರೆಗೆ ಒಟ್ಟು 20.6 ಮಿಮೀ ಮಳೆ ಬಿದ್ದಿದೆ.
ರಾಯಚೂರು ತಾಲೂಕು: ಅದೇ ರೀತಿ ತಾಲೂಕಿನ ಯರಗೇರಾ- 10 ಮಿಮೀ, ಯರಮರಸ್- 43.2 ಮಿಮೀ, ಗಿಲ್ಲೆಸೂಗೂರು- 10.5 ಮಿಮೀ, ಕಲ್ಮಲಾ-36 ಮಿಮೀ, ಜೇಗರಕಲ್-38.2 ಮಿಮೀ, ಗಾಜರಾಳ-22.8 ಮಿಮೀ, ದೇವಸೂಗೂರು- 39.6 ಮಿಮೀ, ಚಂದ್ರಬಂಡಾ-20 ಮಿಮೀ ಮಳೆಯಾಗಿದೆ.
ಮಾನವಿ ತಾಲೂಕು: ಮಾನವಿಯಲ್ಲಿ 8.6 ಮಿಮೀ ಮಳೆಯಾಗಿದೆ. ಕುರ್ಡಿ- 21.2 ಮಿಮೀ, ಕಲ್ಲೂರು- 30 ಮಿಮೀ, ಸಿರವಾರ-54 ಮಿಮೀ, ಮಲ್ಲಟ- 34 ಮಿಮೀ, ಕವಿತಾಳ- 24 ಮಿಮೀ, ಕುರುಕುಂದಾ- 18 ಮಿಮೀ, ಪಾಮನಕಲ್ಲೂರು- 2.3 ಮಿಮೀ, ರಾಜಲಬಂಡಾ-10.3 ಮಿಮೀ, ಹಾಲಾಪುರ-20 ಮಿಮೀ ಮಳೆಯಾಗಿದೆ.
ದೇವದುರ್ಗ: ಪಟ್ಟಣದಲ್ಲಿ 13 ಮಿಮೀ, ಅರಕೇರಾ-7.6 ಮಿಮೀ, ಗಲಗ- 3 ಮಿಮೀ, ಗಬ್ಬೂರು-11.3 ಮಿಮೀ, ಜಾಲಹಳ್ಳಿ- 19 ಮಿಮೀ ಮಳೆ ಬಿದ್ದಿದೆ.
ಲಿಂಗಸ್ಗೂರು: ಪಟ್ಟಣದಲ್ಲಿ 2 ಮಿಮೀ, ಹಟ್ಟಿ- 11 ಮಿಮೀ, ಮಸ್ಕಿ- 9.6 ಮಿಮೀ, ಮುದಗಲ್- 12.4 ಮಿಮೀ ಮಳೆಯಾಗಿದೆ. ಸಿಂಧನೂರಿನಲ್ಲಿ 4.8 ಮಿಮೀ, ಜವಳಗೇರಾ-3.4 ಮಿಮೀ, ಬಳಗಾನೂರು- 7 ಮಿಮೀ, ಗುಡದೂರು- 38.3 ಮಿಮೀ, ತುರ್ವಿಹಾಳ- 15.8 ಮಿಮೀ, ವಲ್ಕಂದಿನ್ನಿ- 2 ಮಿಮೀ, ಗುಂಜಳ್ಳಿ-15.2 ಮಿಮೀ ಹಾಗೂ ಜಾಲಿಹಾಳ-6.2 ನಷ್ಟು ಮಳೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.