ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮೋಜಿನಲ್ಲಿ ಎಪಿಎಂಸಿ ಆಡಳಿತ ಮಂಡಳಿ

Lingaraj Badiger
Updated On : 19 Sept 2013, 11:11 am

ಮುದಗಲ್: ಸ್ಥಳೀಯ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ರೈತರು ಬೆಳೆದ ಧಾನ್ಯಕ್ಕೆ ರಕ್ಷಣೆ ಇರದೇ ಇದ್ದರೂ ಆಡಳಿತ ಮಂಡಳಿ ಪ್ರವಾಸದ ಮೋಜಿನಲ್ಲಿ ತೊಡಗಿದ್ದಾರೆ. ಮಂಡಳಿಯ ನಿರ್ಲಕ್ಷ್ಯವೇ ಇಂದಿನ ಮಳೆಗೆ ಸೂರ್ಯಕಾಂತಿ ಹಾನಿಯಾಗಿರುವುದಕ್ಕೆ ಕಾರಣ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಆರೋಪಿಸಿದ್ದಾರೆ.
ಪಟ್ಟಣದ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಮಳೆಗೆ ಸೂರ್ಯಕಾಂತಿ ತೊಯ್ದಿರುವ ವಿಷಯ ತಿಳಿದು ಪತ್ರಿಕೆಯೊಂದಿಗೆ ಮಾತನಾಡಿ, ಅಧ್ಯಕ್ಷ ಮತ್ತು ಕಾರ್ಯದರ್ಶಿಗೆ ಮುತ್ತಿಗೆ ಹಾಕಿದರೂ ನಿರ್ದಾಕ್ಷಿಣ್ಯವಾಗಿ ಹಾನಿಗೆ ಪರಿಹಾರಧನ ನೀಡುವುದಿಲ್ಲವೆಂದು ಹೇಳಿರುವುದು ರೈತಪರ ಕಾಳಜಿ ಎಷ್ಟೆನ್ನುವುದು ತಿಳಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳೆದ ಫಸಲು ಮಳೆ ಪಾಲು: ಸಾವಿರಾರು ಚೀಲಗಳಲ್ಲಿ ಸೂರ್ಯಕಾಂತಿ ಮಾರಾಟಕ್ಕೆ ತಂದ ರೈತ ಬಿಸಿಲಿಗೆ ಒಣಗಿಸಲು ರಸ್ತೆಯಲ್ಲಿಯೇ ಹಾಕುವಂತಹ ಪರಿಸ್ಥಿತಿಯನ್ನು ಎಪಿಎಂಸಿ ಆಡಳಿತ ಮಂಡಳಿ ತಂದಿದೆ. ಏಕಾಏಕಿ ಮಳೆಗೆ ಸೂರ್ಯಕಾಂತಿ ತೊಯ್ದಿದ್ದರಿಂದ ಕಷ್ಟಪಟ್ಟು ಬೆಳೆದ ರೈತನ ಹಾನಿ ತುಂಬುವವರಾರು ಎನ್ನುವಂತಾಗಿದೆ. ರೈತನ ಪರವಾಗಿ ಭರವಸೆ ನೀಡದೇ ಇರುವುದು ವಿಪರ್ಯಾಸದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement