22ರಂದು ಆಯುಷ್ ಶಿಬಿರ
ರಾಯಚೂರು: ಕರ್ನಾಟಕ ಸರ್ಕಾರದ ಆಯುಷ್ ನಿರ್ದೇಶನಾಲಯದಿಂದ ಅನುಷ್ಠಾನಗೊಳಿಸಲಾದ ಮಾನವಿ ತಾಲೂಕು ಮಟ್ಟದ ಆಯುಷ್ ವೈದ್ಯಾಧಿಕಾರಿಗಳ ಉಪನ್ಯಾಸ ಶಿಬಿರವನ್ನು ಸೆ.22ರಂದು ಮಾನವಿ ಪಟ್ಟಣದ ಕಲ್ಮಠ ಆಯುರ್ವೇದಿಕ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಅಂದು ಬೆ. 9.30ಕ್ಕೆ ನಡೆಯುವ ಶಿಬಿರದಲ್ಲಿ ಸರ್ಕಾರಿ ಮತ್ತು ಖಾಸಗಿ ಆಯುಷ್ ವೈದ್ಯರು ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ತಾಲೂಕು ಆಯುಷ್ ಅಧಿಕಾರಿ ಡಾ. ಚಂದ್ರಶೇಖರ ಸುವರ್ಣಗಿರಿಮಠ ತಿಳಿಸಿದ್ದಾರೆ.
--