ಎಸ್ಸೆಸ್ಕೆ ಸಮಾಜದಿಂದ ಗಣೇಶ ವಿಸರ್ಜನೆ
ಸಿಂಧನೂರು: ನಗರದ ಆದರ್ಶ ಕಾಲೋನಿಯಲ್ಲಿರುವ ಅಂಬಾಭವಾನಿ ದೇವಸ್ಥಾನದ ಪಕ್ಕದಲ್ಲಿ ಎಸ್‌ಎಸ್‌ಕೆ ಸಮಾಜದಿಂದ 9 ದಿನಗಳ ಕಾಲ ಪ್ರತಿಷ್ಠಾಪಿಸಿದ್ದ ತಿರುಪತಿ ಅಲಂಕಾರದ ಗಣೇಶ ಮೂರ್ತಿಯನ್ನು ಅದ್ಧೂರಿಯಾಗಿ ಬುಧವಾರ ರಾತ್ರಿ ವಿಸರ್ಜನೆ ಮಾಡಲಾಯಿತು.
ಸಮಾಜದ ಅಧ್ಯಕ್ಷ ಶಶಿಕುಮಾರ ದಾನಿ ಹಾಗೂ ತರುಣ ಸಂಘದ ಅಧ್ಯಕ್ಷ ರಾಜು ಬದಿ ಸಮ್ಮುಖದಲ್ಲಿ ಪೂಜೆ ನೆರವೇರಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮಾಜದ ಹಿರಿಯ ಮುಖಂಡ ಡಾ. ಜೆ.ಎನ್.ಇರಕಲ್, ತರುಣ ಸಂಘದ ಅಧ್ಯಕ್ಷ ರಾಜು ಬದಿಮಾತನಾಡಿದರು. ಹಿರಿಯ ಮುಖಂಡ ಅಂಬಾಸಾ ಮೆಹರವಾಡೆ, ಡಾ.ನಾರಾಯಣ ಸಾ ಬಾಲಿ, ಸಮಾಜದ ಉಪಾಧ್ಯಕ್ಷ ಶ್ರೀನಿವಾಸ ಬಾಕಳೆ, ಗುರು ಬದಿ, ಶಂಕರ ಕಬಾಡಿ, ಕಿರಣ ಬಾಲಿ, ಜಯದುರ್ಗ ಮಹಿಳಾ ಮಂಡಳಿ ಅಧ್ಯಕ್ಷೆ ರಾಜೇಶ್ವರಿ ಇರಕಲ್ ಉಪಸ್ಥಿತರಿದ್ದರು.
ಗಣೇಶೋತ್ಸವ ನಿಮಿತ್ತ ಮಹಿಳೆಯರಿಗೆ ಏರ್ಪಡಿಸಿದ್ದ ವಿವಿಧ ಆಟೋಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಮಾಜದ ಅಧ್ಯಕ್ಷ ಶಶಿಕುಮಾರ ದಾನಿ ಅಧ್ಯಕ್ಷತೆ ವಹಿಸಿದ್ದರು. ಭಾರತಿ ಮತ್ತು ರಾಧಾಬಾಯಿ ಪ್ರಾರ್ಥಿಸಿದರು. ನಾರಾಯಣ ಸಾ ಪವಾರ್ ನಿರೂಪಿಸಿ, ವಂದಿಸಿದರು. ನಂತರ ಹರಾಜು ಕಾರ್ಯಕ್ರಮ ಮತ್ತು ಲಕ್ಕಿ ಡ್ರಾ ಮಾಡಲಾಯಿತು. ಸಮಾಜದ ನೂರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.