ಪ್ರವಾಹ: ನಿಧಿ ಸಂಗ್ರಹ ಚೆಕ್ ಸಲ್ಲಿಕೆ
ರಾಯಚೂರು: ಉತ್ತರಾಖಂಡ್ ಪ್ರವಾಹ ಪರಿಹಾರ ಕಾರ್ಯಕ್ಕಾಗಿ ಇಲ್ಲಿನ ಕೃಷಿ ವಿವಿಯ ಸಿಬ್ಬಂದಿಯ ಒಂದು ದಿನದ ವೇತನದ ಡಿಡಿಯನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಯಿತು.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಎಲ್ಲ ಶಿಕ್ಷಕರ ಒಂದು ದಿನದ ಸಂಬಳದ ಮೊತ್ತ ರು. 5,99,128 ಡಿಡಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅವರಿಗೆ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಡಾ.ಎಸ್.ಎನ್. ವಾಸುದೇವನ್, ಡಾ. ಎಸ್.ಎಸ್. ಪಾಟೀಲ್, ಡಾ. ಗುರುರಾಜ ಸುಂಕದ್, ಡಾ. ಪ್ರಮೋದ ಕಟ್ಟಿ ಹಾಗೂ ಡಾ. ಉದಯಕುಮಾರ ನಿಡೋಣಿ ಹಸ್ತಾಂತರಿಸಿದರು. ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ವಿ. ಪಾಟೀಲ್ ಸೇರಿ ಅನೇಕರಿದ್ದರು.