ನರಿ ಕಚ್ಚಿ ಮೃತಪಟ್ಟ ಮಹಿಳೆ ಕುಟುಂಬಕ್ಕೆ ಪರಿಹಾರದ ಚೆಕ್
ಲಿಂಗಸ್ಗೂರು: ತಾಲೂಕಿನ ಕಾಚಾಪುರದ ಮಹಿಳೆಗೆ ಹುಚ್ಚು ನರಿ ಕಚ್ಚಿ ಸಾವನ್ನಪ್ಪಿದ ಕಾರಣ ಅವರ ಕುಟುಂಬ ವರ್ಗಕ್ಕೆ ಶುಕ್ರವಾರ 5 ಲಕ್ಷ ಮೊತ್ತದ ಪರಿಹಾರ ಚೆಕ್ಕನ್ನು ಶಾಸಕ ಮಾನಪ್ಪ ವಜ್ಜಲ್ ವಿತರಿಸಿದರು. ಶಾಂತಮ್ಮ ವಿರುಪಾಕ್ಷಪ್ಪ ಎಂಬುವರು ಕಳೆದ ವರ್ಷ ಹುಚ್ಚು ನರಿ ಕಚ್ಚಿ ಸಾವನ್ನಪ್ಪಿದ ಪ್ರಯುಕ್ತ ಅರಣ್ಯ ಇಲಾಖೆಯಿಂದ ಬಿಡುಗಡೆಯಾದ ಹಣವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಾದ ಹುಸೇನ್‌ಸಾಬ, ಲೀಲಾ, ಗುಂಡಪ್ಪ, ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ಮಹಾಂತಗೌಡ ಪಾಟೀಲ್, ಗುಂಡಪ್ಪ ಸಾಹುಕಾರ, ಅಮರೇಗೌಡ ಕಳ್ಳಿಲಿಂಗಸ್ಗೂರು, ಆದಪ್ಪ ಸಾಹುಕಾರ ಇದ್ದರು.
ಹೈ-ಕ ಪ್ರದೇಶ
ಸಮಗ್ರ ಪ್ರಗತಿ ಕಾಣಲಿ: ಕುರಿ
ರಾಯಚೂರು: ಹೈ.ಕ. ವಿಮೋಚನಾ ದಿನಾಚರಣೆ ಅಂಗವಾಗಿ ಈಚೆಗೆ ನಗರದ ಕೃಷಿ ವಿವಿಯಲ್ಲಿ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಹೈ.ಕ. ಹೋರಾಟ ಸಮಿತಿ ಮಹಾಪ್ರಧಾನ ಕಾರ್ಯದರ್ಶಿ ಬಸವಂತರಾಯ ಕುರಿ ಮಾತನಾಡಿ, ಹೈ.ಕ. ಭಾಗಕ್ಕೆ 371ನೇ ಕಲಂ ಅಡಿ ವಿಶೇಷ ಸ್ಥಾನಮಾನ ದೊರೆಯಲು ಕಾಲಸನಿಹವಾಗಿದೆ. ಅದರಿಂದ ಈ ಪ್ರದೇಶದ ಸಮಗ್ರ ಪ್ರಗತಿಯಾಗಲೆಂದು ಆಶಿಸಿದರು. ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಡಾ. ಬಿ.ವಿ. ಪಾಟೀಲ್ ಧ್ವಜಾರೋಹಣ ನೇರವೇರಿಸಿದರು. ಕುಲಸಚಿವ ಡಾ. ಡಿ.ಪಿ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉಪನಿರ್ದೇಶಕಿ ಡಾ. ಜಾಗೃತಿ ದೇಶಮಾನೆ, ಡಾ. ಎ. ನಾಗನಗೌಡ, ಡಾ. ರಾಜಣ್ಣ ಮತ್ತಿತರರಿದ್ದರು.
ಹಣ್ಣು ವಿತರಣೆ
ಸಿಂಧನೂರು: ಕರವೇ ರಾಜ್ಯ ಕಾರ್ಯಧ್ಯಕ್ಷರಾದ ಪ್ರವೀಣ ಶೆಟ್ಟಿ 41ನೇ ಹುಟ್ಟುಹಬ್ಬ ನಿಮಿತ್ತ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ರೋಗಿಗಳಿಗೆ ಹಣ್ಣು, ಬ್ರೇಡ್, ಹಾಲು ವಿತರಿಸಿದರು. ಕರವೇ ತಾಲೂಕಾಧ್ಯಕ್ಷ ಅಜಿತ್ ಒಸ್ತವಾಲ್, ಗೌರವ ಅಧ್ಯಕ್ಷ ಖಾಜಿ ಮಲಿಕ್ ವಕೀಲರು,ನಾಗರಾಜ ಗಸ್ತಿ, ಕೆ. ಕರಿಲಿಂಗಪ್ಪ, ನಗರ ಮಹಿಳಾ ಘಟಕ ಅಧ್ಯಕ್ಷೆ ಇಂದುಮತಿ, ಖಾಜಾ ಬಡಿಬೇಸ್, ನಗರ ಘಟಕ ಅಧ್ಯಕ್ಷ ಕಲ್ಲಪ್ಪ, ಬಸವ ಕೆ, ಮಲ್ಲಿಪಾಟೀಲ್, ಫಾರೂಕ್ ಅಹ್ಮದ್, ರಾಜುಕೋಟೆ, ವೀರೇಶ ಯರದಿಹಾಳ, ಡಿಶ್ ಮಲ್ಲಿಕಾರ್ಜುನ, ಲಕ್ಷ್ಮೀ ಪತ್ತಾರ, ಡಾ. ವಿರೂಪಾಕ್ಷಿ, ವೈ. ಅನಿಲ್ ಕುಮಾರ. ಡಾ. ವೀರೇಶ ಭಾಗವಹಿಸಿದ್ದರು.