ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ದೇವದುರ್ಗ ಅಭಿವೃದ್ಧಿಗೆ ಪ್ರಯತ್ನ'

Lingaraj Badiger
Updated On : 23 Sept 2013, 11:08 am

ದೇವದುರ್ಗ: ಪಟ್ಟಣದ ಜನತೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕೈಗೊಂಡು ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ನೂತನ ಪುರಸಭೆ ಅಧ್ಯಕ್ಷರು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದಾರೆಂದು ಇಲ್ಲಿನ ಶ್ರೀಕಪಿಲ ಸಿದ್ದರಾಮೇಶ್ವರ ಶಿವಾಚಾರ್ಯರು ವಿಶ್ವಾಸ ವ್ಯಕ್ತಪಡಿಸಿದರು.
ಅವರು ಪಟ್ಟಣದಲ್ಲಿ ಭಾನುವಾರ ಗೆಳೆಯರ ಬಳಗದಿಂದ ಆಯೋಜಿಸಿದ್ದ ನೂತನ ಪುರಸಭೆ ಅಧ್ಯಕ್ಷರಿಗೆ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಪಟ್ಟಣದ ರಸ್ತೆ ಅಗಲೀಕರಣ, ಒಳಚರಂಡಿ ನಿರ್ಮಾಣದ ಅವಶ್ಯಕತೆಯಿದೆ. ಹಾಗೆಯೇ ರಸ್ತೆಗಳು ತೀರಾ ಹದಗೆಟ್ಟಿದ್ದು, ಶುದ್ಧ ಕುಡಿಯುವ ನೀರು ಸೇರಿ ವಿವಿಧ ಮೂಲ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪುರಸಭೆ ನೂತನ ಅಧ್ಯಕ್ಷ ಫಕ್ರೋದ್ದೀನ್ ಗೌರಂಪೇಟ್, ಪಟ್ಟಣದ ಜನತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ಭರವಸೆ ನೀಡಿದರು. ಪುರಸಭೆ ಉಪಾಧ್ಯಕ್ಷರು, ಸದಸ್ಯರು ಹಾಗೂ ಲೋಕೋಪಯೋಗಿ ಇಲಾಖೆಯಿಂದ ಯಾದಗಿರಿ ಜಿಪಂ ವರ್ಗಾವಣೆಯಾಗಿರುವ ಜೆಇ ಮುದ್ದುರಾಜ್ ಅವರನ್ನು ಸನ್ಮಾನಿಸಲಾಯಿತು. ಬಸವರಾಜ ವಕೀಲರು, ಶಾಲೆಯ ಮುಖ್ಯ ಗುರು ಬಾಲಯ್ಯ, ಬಸವರಾಜ ಸ್ವಾಮಿ ಯರಮಸಾಳ, ಶಂಕರ ಉಭಾಳೆ, ಸಿದ್ದಪ್ಪ ಇಂಗಳದಾಳ, ಸಂಗಮೇಶ ಬಾಗೋಡಿ ಮಾತನಾಡಿದರು.
ಚಂದಪ್ಪ ಅಬಕಾರಿ, ಎಸ್.ಎಸ್.ಗಂಧದ ಮಠ, ಹನುಮಂತ, ಯೂಸೂಫ್ ಖಾನ್, ಶಿವರಾಜ ಶಾಖೆ, ಶೇಖ್ ಹುಸೇನ್ ಮದಿನಾ, ನವಾಬ್ ಗೌರಂಪೇಟ, ಅಮರಯ್ಯ ಕುಂಬಾರ, ದಾವಲಸಾಬ್ ಬಂಡಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement