ನೌಕರರ ಒಕ್ಕೂಟದ ನೂತನ ಪದಾಧಿಕಾರಿ
ರಾಯಚೂರು: ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಘಟಕಕ್ಕೆ ಅಧ್ಯಕ್ಷರಾಗಿ ಎಂ.ಅಮರೇಶ್ವರ ಅವರು ಆಯ್ಕೆಯಾಗಿದ್ದಾರೆ. ನಗರದಲ್ಲಿ ಭಾನುವಾರ ನಡೆದ ಒಕ್ಕೂಟದ ಸಮಾವೇಶದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಮಾರುತಿ, ಉಪಾಧ್ಯಕ್ಷರಾಗಿ ಕೆ.ನಾರಾಯಣ, ತಾಯರಾಜ್ ಮರ್ಚಟ್ಹಾಳ್, ಭೀಮಣ್ಣ ಉದ್ಬಾಳ್, ಖಜಾಂಚಿಯಾಗಿ ಸಿದ್ದರಾಮಪ್ಪಗೌಡ, ಸಂಘಟನಾ ಕಾರ್ಯದರ್ಶಿಗಳಾಗಿ ಶಹಾಬುದ್ದೀನ್, ಜೆ.ಮಲ್ಲಿಕಾರ್ಜುನ, ಪ್ರಕಾಶ ಹೊನ್ನಟಗಿ, ಶಕೀಲ್ ಅಹ್ಮದ್, ಜಂಟಿ ಕಾರ್ಯದರ್ಶಿಗಳಾಗಿ ಮಹಾಂತೇಶ್ ಬಿರಾದಾರ್, ನೋಸಿಯಾ, ಗೋಪಾಲ್ ನಾಯ್ಕ, ಹಿರಿಯ ಸಲಹೆಗಾರರಾಗಿ ಲಕ್ಷ್ಮೀಕುಮಾರ್ ಅವರು ಆಯ್ಕೆಯಾಗಿದ್ದಾರೆ.